ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೈಟೆನ್ಶನ್ ವೈಯರ್ ತಗುಲಿ ಈ ಹಿಂದೆ ಬಾಲಕನೊಬ್ಬ ಮೃತಪಟ್ಟಿದ್ದು, ಇದೀಗ ಮತ್ತೊಂದು ಪ್ರಕರಣ ಮರುಕಳಿಸಿದೆ. ಆರ್.ಟಿ. ನಗರದ ಚಾಮುಂಡಿ ನಗರದ ಚಿಂಗಂ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ.
ಅಬೂಬಕರ್ ಎಂಬ 11 ವರ್ಷದ ಬಾಲಕ ಸೋಮವಾರದಂದು ಗಾಳಿಪಟ ಹಾರಿಸಲು ಹೋದ ವೇಳೆ ಹೈಟೆನ್ಶನ್ ವೈಯರ್ ತಗುಲಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವನನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆ.
ಈ ಭಾಗದಲ್ಲಿ ಹೈಟೆನ್ಶನ್ ವೈಯರ್ ಅತಿ ಕೆಳಗೆ ಹಾದು ಹೋಗಿದ್ದು, ತಾರಸಿ ಮೇಲಿಂದ ಕೈಚಾಚಿದರೆ ಸಿಗುವಂತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೆ ಕೆಲವೊಂದು ಕಡೆ ಹೈಟೆನ್ಶನ್ ವೈಯರ್ ಗಿಂತ ಮನೆಗಳು ಎತ್ತರದಲ್ಲಿವೆ. ಹೀಗಾಗಿ ಬೆಸ್ಕಾಂ ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.