ಆಲ್ಮಂಡ್ ಬಟರ್ ನಲ್ಲಿ ಹೇರಳವಾಗಿ ಪ್ರೊಟಿನ್ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ಇದನ್ನು ಹೊರಗಡೆ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು. ದುಡ್ಡು ಉಳಿಯುತ್ತದೆ. ದೇಹ ತೂಕದ ಬಗ್ಗೆ ಎಚ್ಚರಿಕೆ ವಹಿಸುವವರು ಸ್ನ್ಯಾಕ್ಸ್ ನ ಬದಲಾಗಿ ಇದನ್ನು ಒಂದು ಚಮಚ ತಿನ್ನಬಹುದು.
ಬೇಕಾಗುವ ಸಾಮಗ್ರಿಗಳು:
2 ಕಪ್- ಬಾದಾಮಿ, 1 ಟೇಬಲ್ ಸ್ಪೂನ್ -ಆರ್ಗೆನಿಕ್ ತೆಂಗಿನೆಣ್ಣೆ.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಬಾದಾಮಿ ಹುರಿದುಕೊಳ್ಳಿ. ನಂತರ ಇದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಟ್ಟು ಮಿಕ್ಸಿ ಜಾರಿನಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ತೆಂಗಿನೆಣ್ಣೆಯನ್ನು ಸೇರಿಸಿ 10 ನಿಮಿಷಗಳ ಕಾಲ ಮತ್ತೆ ರುಬ್ಬಿಕೊಳ್ಳಿ.
ಆದರೆ ಪ್ರತಿ ಅರ್ಧ ನಿಮಿಷಕ್ಕೊಮ್ಮೆ ಮಿಕ್ಸಿಯನ್ನು ಆಫ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮತ್ತೆ ಮಿಕ್ಸಿ ಆನ್ ಮಾಡಿ. ಹೀಗೆ ಮಾಡುವುದರಿಂದ ಬಾದಾಮಿಯ ಮಿಶ್ರಣ ಬೆಣ್ಣೆ ರೀತಿ ಮೃದುವಾಗುತ್ತದೆ. ಇದನ್ನು ಒಂದು ಗ್ಲಾಸ್ ಜಾರಿನಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳಿ. ಹೊರಗಡೆ 15 ದಿನಗಳ ಕಾಲ ಇಡಬಹುದು. ಫ್ರಿಡ್ಜ್ ನಲ್ಲಿಟ್ಟರೆ ಜಾಸ್ತಿ ದಿನ ಉಪಯೋಗಿಸಬಹುದು.