alex Certify ಹೇಗಿರುತ್ತೆ ಗುರುವಾರ ಹುಟ್ಟಿದವರ ವ್ಯಕ್ತಿತ್ವ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಗಿರುತ್ತೆ ಗುರುವಾರ ಹುಟ್ಟಿದವರ ವ್ಯಕ್ತಿತ್ವ….?

ಗುರು ಗ್ರಹ ಈ ವಾರದ ಅಧಿಪತಿ. ಈ ವಾರದಲ್ಲಿ ಹುಟ್ಟಿದವರು ಆಶಾವಾದಿಗಳು, ಹಾಸ್ಯಪ್ರವೃತ್ತಿಯವರು ಆಗಿರುತ್ತಾರೆ. ಇವರು ಜೀವನವನ್ನು ಯಾವಾಗಲೂ ಖುಷಿಯಿಂದ ಅನುಭವಿಸುವುದಕ್ಕೆ ನೋಡುತ್ತಾರೆ. ಜೀವನದಲ್ಲಿ ಸಾಕಷ್ಟು ಏಳು ಬೀಳುಗಳು ಇದ್ದರೂ ಅದನ್ನು ಮೆಟ್ಟಿ ನಿಲ್ಲುವ ಛಲವುಳ್ಳವರು.

ಇನ್ನು ಇವರು ಇನ್ನೊಬ್ಬರಿಗೆ ಉಪದೇಶ ಮಾಡವುದರಲ್ಲಿ ಎತ್ತಿದ ಕೈ. ಇವರ ಸುತ್ತಮುತ್ತ ಯಾವಾಗಲೂ ಜನರಿರುತ್ತಾರೆ. ಇವರ ಮಾತಿನಿಂದ ಸಾಕಷ್ಟು ಜನ ಪ್ರಭಾವಿತರಾಗುತ್ತಾರೆ.

ಇನ್ನು ಇವರು ನಾಯಕತ್ವ ನಿಭಾಯಿಸುವಲ್ಲಿ ಕೂಡ ಜಾಣರು. ಇನ್ನೊಬ್ಬರನ್ನು ತಮ್ಮತ್ತ ಬೇಗ ಸೆಳೆದುಕೊಳ್ಳುತ್ತಾರೆ. ಇನ್ನು ಕೆಲಸದ ವಿಷಯಕ್ಕೆ ಬಂದಾಗ ಒಂದೇ ರೀತಿಯ ಕೆಲಸ ಮಾಡುವುದು ಎಂದರೆ ಇವರಿಗೆ ಬೇಜಾರು. ಬದಲಾವಣೆ ಬಯಸುತ್ತಾರೆ. ಪ್ರಯಾಣ ಮಾಡುವುದು ಇವರಿಗೆ ತುಂಬಾ ಇಷ್ಟ.

ಪ್ರೀತಿಯ ವಿಷಯಕ್ಕೆ ಬಂದರೆ ಇವರು ಮನಸ್ಸಿನಲ್ಲಿ ಇರುವುದನ್ನು ನೇರವಾಗಿ ಹೇಳಿಬಿಡುವವರು. ಇನ್ನೊಬ್ಬರು ಏನು ತಿಳಿದುಕೊಳ್ಳುತ್ತಾರೋ ಎಂದು ಯೋಚಿಸುವುದಿಲ್ಲ. ಇದರಿಂದ ಸ್ವಲ್ಪ ತೊಂದರೆ ಅನುಭವಿಸುತ್ತಾರೆ. ಇವರು ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಯಶಸ್ವಿ ಜೀವನವನ್ನು ನಡೆಸಬಹುದು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...