![](https://kannadadunia.com/wp-content/uploads/2022/08/1.jpg)
ವಿಜ್ಞಾನ ಮುಂದುವರಿದಂತೆ ಹೊಸ ತಂತ್ರಜ್ಞಾನಗಳೂ ಅಭಿವೃದ್ಧಿಯಾಗುತ್ತಿವೆ. ದಿನನಿತ್ಯದ ಅಗತ್ಯ ವಸ್ತುಗಳು ಇನ್ನಷ್ಟು ಆಧುನಿಕವಾಗುತ್ತಿವೆ. ಯಂತ್ರಗಳು ಸಹ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಲೇ ಇವೆ. ಉದಾಹರಣೆಗೆ ನಾವು ಬಳಸುವ ರೆಫ್ರಿಜರೇಟರ್ ಅನ್ನೇ ತೆಗೆದುಕೊಳ್ಳಿ.
ಇಂದಿನ ಫ್ರಿಡ್ಜ್‌ಗಳಿಗೂ 66 ವರ್ಷಗಳ ಹಿಂದಿನ ಫ್ರಿಡ್ಜ್‌ಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಈಗ ನಾವು ಬಳಸುವ ಫ್ರಿಡ್ಜ್‌ಗಳು ಹೆಚ್ಚು ಕರೆಂಟ್ ಬಳಕೆ ಮಾಡಿಕೊಳ್ಳುವುದಿಲ್ಲ. ಇಂಧನ ಉಳಿತಾಯ ಮಾಡುವ ಫೋರ್ ಸ್ಟಾರ್ ಅಥವಾ ಫೈವ್ ಸ್ಟಾರ್ ಫ್ರಿಡ್ಜ್‌ಗಳು ಇವಾಗಿದ್ದರೂ 1950ರ ದಶಕದಲ್ಲಿ ಬಳಕೆಯಲ್ಲಿದ್ದ ಫ್ರಿಡ್ಜ್‌ಗಳಷ್ಟು ಚೆನ್ನಾಗಿಲ್ಲ. ಆಗ ದೇಶಕ್ಕೆ ಸ್ವಾತಂತ್ರ್ಯ ಬಂದು ಕೇವಲ 3 ವರ್ಷಗಳಾಗಿತ್ತು, ಭಾರತ ಇಷ್ಟೊಂದು ಅಭಿವೃದ್ಧಿ ಹೊಂದಿರಲಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ 66 ವರ್ಷಗಳಷ್ಟು ಹಳೆಯ ಫ್ರಿಡ್ಜ್ ವಿಡಿಯೋ ಒಂದು ವೈರಲ್ ಆಗುತ್ತಿದೆ. ಹಳೆಯ ಈ ರೆಫ್ರಿಜರೇಟರ್ ನೋಡಿದ್ರೆ ನೀವು ಹೊಸದನ್ನು ಕೂಡ ಮರೆತು ಬಿಡ್ತೀರಾ. @lostinhist0ry ಹೆಸರಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ 66 ವರ್ಷಗಳ ಹಿಂದಿನ ಫ್ರಿಜ್‌ನ ಜಾಹೀರಾತನ್ನು ತೋರಿಸಲಾಗಿದೆ. 1 ನಿಮಿಷ 17 ಸೆಕೆಂಡ್ ವೀಡಿಯೋದಲ್ಲಿ ಎರಡು ವಿಷಯಗಳು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತವೆ.
ಮೊದಲನೆಯದಾಗಿ ಇದು 1956ರ ಜಾಹೀರಾತು, ಎರಡನೆಯದು ಆ ಕಾಲದ ಫ್ರಿಡ್ಜ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿತ್ತು ಅನ್ನೋದು. ಈ ರೆಫ್ರಿಜರೇಟರ್ ಸಿಂಗಲ್ ಡೋರ್ ಹೊಂದಿದೆ. ಅದರೊಳಗೆ ಪದಾರ್ಥಗಳನ್ನು ಇಡಲು ಸಾಕಷ್ಟು ಜಾಗವಿದೆ. ಈಗಿನ ಕಾಲದ ಫ್ರಿಡ್ಜ್‌ನಲ್ಲಿ ಇಷ್ಟೊಂದು ಜಾಗವಿರುವುದು ಸಾಧ್ಯವೇ ಇಲ್ಲ. ಲಕ್ಷಾಂತರ ರೂಪಾಯಿ ಕೊಟ್ಟು ಡಬಲ್ ಡೋರ್ ಫ್ರಿಡ್ಜ್ ಖರೀದಿಸಿದ್ರೂ ಅದರಲ್ಲಿ ಇಷ್ಟು ಸ್ಪೇಸ್ ಇರುವುದಿಲ್ಲ. ಬಾಗಿಲುಗಳ ಮೇಲೆ ವಸ್ತುಗಳನ್ನು ಇಡಲು ಸ್ಥಳವಿದೆ. ವಿಶೇಷವೆಂದರೆ ಬಾಗಿಲಿಗೆ ಕೆಲವು ಶಟರ್‌ಗಳಿದ್ದು, ಅದರಿಂದ ಎಲ್ಲವನ್ನೂ ಮುಚ್ಚಿಯೇ ಇಡಬಹುದು.
ಬಹುತೇಕ ಇಂದಿನ ತರಕಾರಿ ಪೆಟ್ಟಿಗೆಯಂತೆಯೇ ಕೆಳಭಾಗದಲ್ಲಿ ಬಾಕ್ಸ್ ವ್ಯವಸ್ಥೆ ಆಗಲೂ ಇತ್ತು. ಅದರಲ್ಲಿ ತರಕಾರಿಗಳನ್ನು ಅಂದವಾಗಿ ಜೋಡಿಸಬಹುದಿತ್ತು. ಈ ಫ್ರಿಡ್ಜ್ ನಲ್ಲಿ ಐಸ್ ತೆಗೆಯುವ ತಂತ್ರವೂ ಅದ್ಭುತ. ಐಸ್ ಟ್ರೇಯನ್ನು ತಲೆಕೆಳಗಾಗಿ ಎಳೆದರೆ ಕ್ಯೂಬ್ಸ್ ಹೊರಬರುತ್ತದೆ. ಈ ರೀತಿ ಸಾಕಷ್ಟು ವೈಶಿಷ್ಟ್ಯತೆಗಳನ್ನು ಹೊಂದಿದ್ದ ಆ ಕಾಲದ ಫ್ರಿಡ್ಜ್, ಈಗಿನ ದುಬಾರಿ ರೆಫ್ರಿಜರೇಟರ್‌ಗಳಿಗೆ ಸೆಡ್ಡು ಹೊಡೆಯುವಂತಿದೆ.
https://twitter.com/lostinhist0ry/status/1550420291452809223?ref_src=twsrc%5Etfw%7Ctwcamp%5Etweetembed%7Ctwterm%5E1550420291452809223%7Ctwgr%5E2dbb64b7141bab63c1ed9aaf1be53128b0e0b15c%7Ctwcon%5Es1_&ref_url=https%3A%2F%2Fzeenews.india.com%2Fhindi%2Ftechnology%2F66-year-old-fridge-advertisement-of-1956-goes-viral-amused-netizens-wants-one-straightaway%2F1283423