ಸುಂದರವಾದ ಕೂದಲು ಹೊಂದಲು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಹಲವು ವಸ್ತುಗಳನ್ನು ಬಳಸಿದರೂ ಉತ್ತಮ ಫಲಿತಾಂಶ ಸಿಗುವುದಿಲ್ಲ. ಅಂತವರು ಹೆಸರುಬೇಳೆ ಬಳಸಿ ನಿಮ್ಮ ಕೂದಲಿನ ಸಮಸ್ಯೆಯನ್ನು ನಿವಾರಿಸಿ ಆರೋಗ್ಯಕರವಾದ ಕೂದಲನ್ನು ಹೊಂದಬಹುದು.
*ತಲೆಹೊಟ್ಟು ನಿವಾರಣೆ : ಹೆಸರುಬೇಳೆ ಬಳಸಿ ತಲೆ ಹೊಟ್ಟನ್ನು ನಿವಾರಿಸಬಹುದು. ಹೆಸರುಬೇಳೆ ತಲೆಯಲ್ಲಿರುವ ಕೊಳೆಯನ್ನು ನಿವಾರಿಸಿ ಸ್ವಚ್ಛ ಮಾಡುವುದರ ಮೂಲಕ ತಲೆ ಹೊಟ್ಟನ್ನು ನಿವಾರಿಸುತ್ತದೆ. ಹೆಸರುಬೇಳೆ ಪುಡಿಗೆ ನಿಂಬೆ ಮತ್ತು ಅರಶಿನ ಮಿಶ್ರಣ ಮಾಡಿ ನೀರನ್ನು ಸೇರಿಸಿ ಪೇಸ್ಟ್ ತಯಾರಿಸಿ ಅದನ್ನು ನೆತ್ತಿಗೆ ಹಚ್ಚಿ 30 ನಿಮಿಷಗಳ ಬಳಿಕ ವಾಶ್ ಮಾಡಿ.
*ನೆತ್ತಿಯ ಸೋಂಕು ನಿವಾರಣೆ : ನೆತ್ತಿಯಲ್ಲಿ ಕೊಳೆ ಶೇಖರಣೆಯಾಗಿ ಸೋಂಕು ಉಂಟಾಗಿ ನೋಯುತ್ತಿರುತ್ತದೆ. ಇದನ್ನು ನಿವಾರಿಸಲು ಹೆಸರುಬೇಳೆ ಪುಡಿ, ಸೀಗೆಕಾಯಿ ಪುಡಿ, ಕರಿಬೇವಿನ ಪುಡಿ, ದಾಸವಾಳ ಪುಡಿ ಮತ್ತು ವಾಲ್ ನಟ್ ಪುಡಿ ಸೇರಿಸಿ ನೀರಿನೊಂದಿಗೆ ಪೇಸ್ಟ್ ತಯಾರಿಸಿ ನೆತ್ತಿಗೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ.
*ಕೂದಲುದುರುವ ಸಮಸ್ಯೆ ನಿವಾರಣೆ : ಹೆಸರುಬೇಳೆ ಬಳಸಿ ಕೂದಲುದುರುವ ಸಮಸ್ಯೆಯನ್ನು ನಿವಾರಿಸಬಹುದು ಮತ್ತು ತೆಳು ಕೂದಲನ್ನು ದಪ್ಪವಾಗಿಸಬಹುದು. ಹೆಸರುಬೇಳೆ ಮತ್ತು ಮೆಂತ್ಯ ಬೀಜ ರಾತ್ರಿ ನೆನೆಸಿ ಬೆಳಿಗ್ಗೆ ಅದನ್ನು ರುಬ್ಬಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ.