ವಾಷಿಂಗ್ಟನ್: ಆಕೆ ಬೆಸ್ಟ್ ಟೀಚರ್ ಎಂದು ಬಿರುದು ಪಡೆದವಳು. ಆ ಸ್ಕೂಲಿನಲ್ಲಿ 20 ವರ್ಷ ಕೆಲಸ ಮಾಡಿದ್ದಕ್ಕೆ ಬಿರುದು ನೀಡಲಾಗಿತ್ತು. ಉತ್ತಮ ಶಿಕ್ಷಕಿ ಎಂದು ಬಿರುದು ಪಡೆದಾಕೆ ಮಾಡಿರೋ ಕೆಲಸ ಮಾತ್ರ ಅನಾಚಾರ. ಮಕ್ಕಳಿಗೆ ನೈತಿಕ ಶಿಕ್ಷಣ, ಕ್ರೀಡೆ ಹೇಳಿಕೊಡೋದು ಬಿಟ್ಟು ಮಗನ ವಯಸ್ಸಿನವನ ಜೊತೆ ಸೆಕ್ಸ್ ಮಾಡಿ ತಗಲಾಕಿಕೊಂಡಿದ್ದಾರೆ.
ಹೌದು, ಈ ಘಟನೆ ನಡೆದು 12 ವರ್ಷ ಆಗಿದೆ. ಅಮೆರಿಕದ ಜೆಂಟ್ರಿ ಇಂಟರ್ ಮೀಡಿಯೇಟ್ ಶಾಲೆಯ ಶಿಕ್ಷಕಿಯಾಗಿರುವ ಲಿಯಾ ಕ್ವೀನ್17 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳಂತೆ. ಈ ವಿಚಾರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಕಚೇರಿಯಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಅಷ್ಟೆ ಅಲ್ಲ ಡ್ರಗ್ಸ್ ತೆಗೆದುಕೊಂಡ ಆರೋಪವೂ ಈಕೆ ಮೇಲಿದೆ.
ಬಾಸ್ಕೆಟ್ ಬಾಲ್ ಆಟದ ಮೂಲಕ ವಿದ್ಯಾರ್ಥಿಯ ಜೊತೆ ಸಲುಗೆ ಬೆಳೆಸಿಕೊಂಡು ನಂತರ ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆ 2010 ರಲ್ಲಿ ನಡೆದಿದೆ ಎನ್ನಲಾಗಿದೆ. ಇದೀಗ ಬೆಳಕಿಗೆ ಬಂದಿದ್ದು, ಈ ಘಟನೆ ಹೊರ ಬಂದ. ನಂತರ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ 40 ಲಕ್ಷ ದಂಡ ಕಟ್ಟಿಸಿಕೊಂಡು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆಯಂತೆ.