ಹೆರಿಗೆ ನಂತ್ರ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಹೆರಿಗೆ ನಂತ್ರ ಮಹಿಳೆ ಮಾನಸಿಕವಾಗಿ ಬದಲಾಗ್ತಾಳೆ.
ಶಾರೀರಿಕವಾಗಿ ಆಕೆ ಫಿಟ್ ಆಗಲು ಸಮಯ ಹಿಡಿಯುತ್ತದೆ. ನಾರ್ಮಲ್ ಹೆರಿಗೆಯಾದ ಮಹಿಳೆ ಒಂದು ತಿಂಗಳೊಳಗೆ ಸುಧಾರಿಸಿಕೊಳ್ತಾಳೆ. ಸಿಜೇರಿಯನ್ ಆದ ಮಹಿಳೆಗೆ 3 ತಿಂಗಳು ಸಮಯ ಬೇಕೇಬೇಕು. ಸಾಮಾನ್ಯವಾಗಿ ಹೆರಿಗೆ ನಂತ್ರ ಶಾರೀರಿಕ ಸಂಬಂಧ ಬೆಳೆಸಲು ಯಾವುದು ಬೆಸ್ಟ್ ಟೈಂ ಎಂಬುದು ಅನೇಕ ದಂಪತಿಗೆ ತಿಳಿದಿಲ್ಲ.
‘ಪುಷ್ಪಾ’ ಚಿತ್ರದ ಹಾಡೊಂದಕ್ಕೆ ಕುಣಿಯಲಿರುವ ನಟಿ ಸಮಂತಾ ಪಡೆಯಲಿದ್ದಾರಂತೆ 1.5 ಕೋಟಿ ರೂ. ಸಂಭಾವನೆ..!
ಯಾವ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಉತ್ತಮ ಎಂಬ ಪ್ರಶ್ನೆ ಮೂಡುವುದುಂಟು.
ಸಾಮಾನ್ಯವಾಗಿ ಹೆರಿಗೆ ನಂತ್ರ ಹೊಲಿಗೆ ಹಾಕಲಾಗುತ್ತದೆ. ಸಿಜೇರಿಯನ್ ಆದ ಮಹಿಳೆಗೆ ಹೊಲಿಗೆ ಸರಿಯಾಗಲು ಸಮಯ ಹಿಡಿಯುತ್ತದೆ. ಒಂದು ವೇಳೆ ಹಾಕಿದ ಹೊಲಿಗೆ ಕೂಡಿಲ್ಲದ ಸಮಯದಲ್ಲಿಯೇ ಶಾರೀರಿಕ ಸಂಬಂಧ ಬೆಳೆಸಿದ್ರೆ ಅದು ಅಪಾಯವನ್ನು ಆಹ್ವಾನಿಸಿದಂತೆ.
ಹೆರಿಗೆ ನಂತ್ರ ಮಹಿಳೆಯರು ನಿತ್ರಾಣರಾಗ್ತಾರೆ. ವಿಶ್ರಾಂತಿಯ ಅಗತ್ಯವಿರುತ್ತದೆ. ಮಕ್ಕಳನ್ನು ಸಂಭಾಳಿಸುವ ಜೊತೆಗೆ ದೇಹದ ಕೆಲ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಶಾರೀರಿಕ ಸಂಬಂಧ ಬೆಳೆಸಲು ಆತುರ ಬೇಡ.
ಬ್ಲೀಡಿಂಗ್ ಆಗ್ತಾ ಇರುವ ವೇಳೆ ಎಂದೂ ಶಾರೀರಿಕ ಸಂಬಂಧ ಬೆಳೆಸಬಾರದು. ಇದು ಇನ್ಫೆಕ್ಷನ್ ಗೆ ಕಾರಣವಾಗುತ್ತದೆ. ಜೊತೆಗೆ ನೋವು ಹೆಚ್ಚಾಗಿ ಬ್ಲೀಡಿಂಗ್ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ.
‘ಮದಗಜ’ ಚಿತ್ರದ ತೆಲುಗು ವರ್ಷನ್ ಟೈಟಲ್ ಟ್ರ್ಯಾಕ್ ರಿಲೀಸ್
ಗರ್ಭ ಧರಿಸಿದ 9 ತಿಂಗಳು ಹಾಗೂ ಹೆರಿಗೆಯ ನೋವು. ಒಂದೇ ಬಾರಿ ಹೆಚ್ಚಾಗುವ ಜವಾಬ್ದಾರಿ. ಸದಾ ಮಕ್ಕಳನ್ನು ನೋಡಿಕೊಳ್ಳುವ ಹೊಣೆ ಇದೆಲ್ಲವೂ ಮಹಿಳೆ ಮೇಲೆ ಪ್ರಭಾವ ಬೀರುತ್ತದೆ. ಕೆಲವರಿಗೆ ಮಾನಸಿಕ ಕಿರಿಕಿರಿಯಾಗುವ ಸಾಧ್ಯತೆ ಇದೆ. ಖಿನ್ನತೆಗೊಳಗಾಗುವವರೂ ಇದ್ದಾರೆ. ಬಾಣಂತಿ ಸನ್ನೆ ಎಂದೇ ಇದನ್ನು ಕರೆಯಲಾಗುತ್ತದೆ. ಹಾಗಾಗಿ ಪತಿಯಾದವನು ಪತ್ನಿಗೆ ಮಾರಲ್ ಸಪೋರ್ಟ್ ನೀಡಬೇಕೆ ಹೊರತು ಶಾರೀರಿಕ ಸಂಬಂಧಕ್ಕೆ ಒತ್ತಾಯ ಮಾಡಬಾರದು.
ಪ್ರತಿಯೊಬ್ಬ ಮಹಿಳೆಯ ದೇಹ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಶಾರೀರಿಕ ಸಂಬಂಧ ಬೆಳೆಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ. ಮಹಿಳೆ ಶಾರೀರಿಕ ಸಂಬಂಧ ಬೆಳೆಸಲು ಶಕ್ತಳಾ ಎಂಬುದನ್ನು ತಿಳಿದುಕೊಂಡ ನಂತ್ರ ಸಂಬಂಧ ಬೆಳೆಸಿದ್ರೆ ಮುಂದಾಗುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.