ಹೆರಿಗೆ ನಂತ್ರ ಬಹುತೇಕ ಮಹಿಳೆಯರಿಗೆ ತೂಕ ಏರಿಕೆ ಸಮಸ್ಯೆ ಕಾಡುತ್ತದೆ. ಇದು ಅವರ ಚಿಂತೆಗೆ ಕಾರಣವಾಗುತ್ತದೆ.
ಆದ್ರೆ ಮಸಾಜ್ ಮೂಲಕ ಇದನ್ನು ನೀವು ನಿಯಂತ್ರಿಸಬಹುದು. ಎಣ್ಣೆ ಮಸಾಜ್ ನಿಂದ ಸ್ನಾಯುಗಳಿಗೆ ವಿಶ್ರಾಂತಿ ಸಿಕ್ಕು ನೋವು ನಿವಾರಣೆಯಾಗುತ್ತದೆ.
ಸಾಮಾನ್ಯವಾಗಿ ಹೆರಿಗೆ ನಂತ್ರ ನವಜಾತ ಶಿಶುಗಳಿಗೆ ಎಣ್ಣೆ ಮಸಾಜ್ ಮಾಡ್ತಾರೆ. ಈ ವೇಳೆ ತಾಯಿ ಕೂಡ ಎಣ್ಣೆ ಮಸಾಜ್ ಮಾಡಿಸಿಕೊಳ್ಳಬೇಕು. ಬಿಗಿಯಾಗಿದ್ದ ಸ್ನಾಯುಗಳು ಮಸಾಜ್ ನಿಂದ ಸಡಿಲಗೊಳ್ಳುತ್ತವೆ.
ಹೆರಿಗೆ ನಂತ್ರ ಕಾಡುವ ಶರೀರದ ನೋವನ್ನು ಮಸಾಜ್ ಕಡಿಮೆ ಮಾಡುತ್ತದೆ. ಜೊತೆಗೆ ಸ್ನಾಯುಗಳಿಗೆ ಪೋಷಣೆ ನೀಡಿ ಸ್ನಾಯುಗಳು ಬಲಗೊಳ್ಳಲು ನೆರವಾಗುತ್ತವೆ.
ರಕ್ತದ ಹರಿವನ್ನು ಹೆಚ್ಚು ಮಾಡಿ ಎದೆ ಹಾಲು ಉತ್ಪಾದನೆಗೆ ನೆರವಾಗುತ್ತದೆ. ಹಾಗೆ ಒತ್ತಡವನ್ನು ಕಡಿಮೆ ಮಾಡಲು ಮಸಾಜ್ ಒಳ್ಳೆಯದು.
ಸಾಸಿವೆ ಎಣ್ಣೆ ಹಾಗೂ ಹರಳೆಣ್ಣೆ ಮಸಾಜ್ ಗೆ ಉತ್ತಮ. ಇವು ಚರ್ಮವನ್ನು ಮೃದುಗೊಳಿಸುತ್ತವೆ.
ಮಸಾಜ್ ಜೊತೆಗೆ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು. ಇದು ಚರ್ಮವನ್ನು ತೇವಾಂಶಯುಕ್ತವಾಗಿಡುತ್ತದೆ. ಕ್ಯಾಲೋರಿ ಕಡಿಮೆಯಾಗಲು ನೆರವಾಗುತ್ತದೆ.