ಹೆರಿಗೆಯಾದ್ಮೇಲೆ ತೂಕ ಹೆಚ್ಚಾಗೋದು ಮಾಮೂಲಿ. ಆದ್ರೆ ಆಯಾಸದ ಕಾರಣ ಹೆಚ್ಚು ಸಮಯ ವ್ಯಾಯಾಮ ಮಾಡಿ ದೇಹ ದಣಿಸಲು ಸಾಧ್ಯವಿಲ್ಲ. ಹಾಗಾಗಿ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆರಂಭದಿಂದಲೇ ಕೆಲವೊಂದು ಸಣ್ಣ ವ್ಯಾಯಾಮ ಹಾಗೂ ಉತ್ತಮ ಆಹಾರ ಸೇವನೆ ಮಾಡೋದ್ರಿಂದ ಮೊದಲಿನಂತೆ ಫಿಗರ್ ಪಡೆಯಬಹುದು.
ಗರ್ಭದಾರಣೆ ನಂತ್ರ ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡಬೇಕು.
ಹೆರಿಗೆ ನಂತ್ರ ಫಾಸ್ಟ್ ಫುಡ್ ಅಥವಾ ಎಣ್ಣೆಯುಕ್ತ ಆಹಾರ ಸೇವನೆ ಮಾಡಬಾರದು. ಫಾಸ್ಟ್ ಫುಡ್ ಕೊಬ್ಬನ್ನು ಹೆಚ್ಚು ಮಾಡುತ್ತದೆ.
ಸ್ತನ್ಯಪಾನ ಮಾಡಿಸುವ ಅಮ್ಮಂದಿರಿಗೆ ಪೋಷಕಾಂಶವಿರುವ ಆಹಾರವನ್ನು ನೀಡ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದು. ಹಾಗೆ ತೂಕ ಕಡಿಮೆ ಮಾಡಲು ನೆರವಾಗುತ್ತದೆ.
ತೂಕ ಕಡಿಮೆ ಮಾಡಿಕೊಳ್ಳಲು ತಾಜಾ ಪದಾರ್ಥದ ಸೇವನೆ ಮಾಡಬೇಕು. ತಾಜಾ ಹಣ್ಣಿನ ಜ್ಯೂಸ್, ಹಣ್ಣು, ಸೂಪ್ ಸೇವನೆ ಮಾಡಬೇಕು.
ದಿನದಲ್ಲಿ ಎರಡು ಬಾರಿ ಗ್ರೀನ್ ಟೀ-ಲೆಮನ್ ಟೀ ಸೇವನೆ ಮಾಡಿ.
ಹೆರಿಗೆ ನಂತ್ರ ಮಹಿಳೆಯರು ಹಾಲನ್ನು ಅವಶ್ಯವಾಗಿ ಸೇವನೆ ಮಾಡಬೇಕು.
ರಾತ್ರಿ ಮಲಗುವ 2 ಗಂಟೆ ಮೊದಲು ಆಹಾರ ಸೇವನೆ ಮಾಡಿ. ನಂತ್ರ ಸ್ವಲ್ಪ ವಾಕ್ ಮಾಡಿ. ಊಟ ಮಾಡಿದ ತಕ್ಷಣ ಮಲಗಬೇಡಿ.