ಅಮೆರಿಕಾದ -10 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸರೋವರದಲ್ಲಿ ಎರಡು ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ.
ಕೋನಿ ಎಂಬಾಕೆ ಹೆಪ್ಪುಗಟ್ಟಿದ ಸರೋವರದಲ್ಲಿ ಹಾಸಿಗೆಯ ಮೇಲೆ ತೇಲುತ್ತಾ 48 ಗಂಟೆಗಳಿಗೂ ಹೆಚ್ಚು ಕಾಲ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ರೈಲಿನ ನಿರ್ವಾಹಕ ಆಕೆಯನ್ನು ಗಮನಿಸಿದ್ದು, ತಕ್ಷಣ ಕೋನಿಯನ್ನು ರಕ್ಷಿಸಲಾಯಿತು. ರೈಲು ಬರುತ್ತಿದ್ದಂತೆ ತನ್ನ ತೋಳುಗಳನ್ನು ಬೀಸಿದ ಕೋನಿ, ಸಹಾಯಕ್ಕಾಗಿ ಕಿರುಚಿದ್ದಾಳೆ. ಫೆಬ್ರವರಿ 3 ರಂದು ಓಕ್ಲಹೋಮಾ-ಟೆಕ್ಸಾಸ್ ಗಡಿಯಲ್ಲಿರುವ ಲೇಕ್ ಟೆಕ್ಸೋಮಾ ಬಳಿ ಈ ಘಟನೆ ಸಂಭವಿಸಿದೆ.
ಕೋನಿ ಮತ್ತು ಆಕೆಯ ಗೆಳೆಯ ದೋಣಿಯನ್ನು ತಲುಪಲು ನೀರಿನಲ್ಲಿ ತೇಲುವ ಹಾಸಿಗೆಯನ್ನು ತೆಪ್ಪವಾಗಿ ಬಳಸಲು ಪ್ರಯತ್ನಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಗೆಳೆಯ ದಡಕ್ಕೆ ಈಜಲು ಶಕ್ತನಾದ. ಆದರೆ, ಕೋನಿ ಹೆಪ್ಪುಗಟ್ಟಿದ ಸರೋವರಕ್ಕೆ ಹಾರಲಿಲ್ಲ. ಹೀಗಾಗಿ, ಕೋನಿ ಹಾಸಿಗೆಯ ಮೇಲೆ ಸುಮಾರು 3 ಕಿಲೋಮೀಟರ್ ಅಲೆದಾಡಿದ್ದಾಳೆ.
ತೇಲುತ್ತಿದ್ದ ಏರ್ ಮ್ಯಾಟ್ರೆಸ್ (ಹಾಸಿಗೆ)ಯಲ್ಲಿ ಕೋನಿ ಅಲುಗಾಡುತ್ತಿರುವುದನ್ನು ರೈಲು ಸಿಬ್ಬಂದಿ ನೋಡಿದ್ದು, ಕೂಡಲೇ ಸಹಾಯಕ್ಕೆ ಧಾವಿಸಿದ್ದಾರೆ. ಈ ವೇಳೆ ತಾಪಮಾನವು -10 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಕೂಡಲೇ ಕೋನಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಕಠಿಣ ಹವಾಮಾನದಲ್ಲೂ ಆಕೆ ಬದುಕುಳಿದಿದ್ದು, ನಿಜಕ್ಕೂ ಅದೃಷ್ಟವೇ ಸರಿ.