alex Certify ಹೆಣ್ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುತ್ತಾರೆ ಈ ಪ್ಯಾಡ್ ಮ್ಯಾನ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುತ್ತಾರೆ ಈ ಪ್ಯಾಡ್ ಮ್ಯಾನ್..!

Jamshedpur Pad Man Distributes Sanitary Napkins For Free, Asks Girls to Plant a Sapling in Exchange of a Padಜಮ್ಶೆಡ್‌ಪುರ: ಪ್ರತಿ ಮಹಿಳೆಯ ಜೀವನದಲ್ಲಿ ಮುಟ್ಟು ಎಂಬುದು ಬಹಳ ಸ್ವಾಭಾವಿಕವಾಗಿದ್ದರೂ ಸಹ, ಭಾರತದಲ್ಲಿ ಮತ್ತು ಪ್ರಪಂಚದ ಹಲವಾರು ಭಾಗಗಳಲ್ಲಿ ಮುಟ್ಟನ್ನು ಇನ್ನೂ ನಿಷೇಧಿತ ವಿಷಯವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ, ಬಹಳಷ್ಟು ಮಹಿಳೆಯರು ಇದರ ಬಗ್ಗೆ ಯಾವುದೇ ಜ್ಞಾನವನ್ನು ಹೊಂದಿಲ್ಲ.

ಮಹಿಳೆಯರಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅನೇಕರು ಮುಂದೆ ಬಂದಿದ್ದಾರೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ 32 ವರ್ಷದ ತರುಣ್ ಕುಮಾರ್ ಕೂಡ ಒಬ್ಬರು. ಅವರು ಜಮ್ಶೆಡ್‌ಪುರದ ಪ್ಯಾಡ್ ಮ್ಯಾನ್ ಎಂದೇ ಜನಪ್ರಿಯರಾಗಿದ್ದಾರೆ.

ತರುಣ್ ತಮ್ಮ ಬೈಕ್ ನಲ್ಲಿ ದೊಡ್ಡ-ದೊಡ್ಡ ಪೆಟ್ಟಿಗೆಯನ್ನು ಗ್ರಾಮೀಣ ಭಾಗದತ್ತ ಒಯ್ಯುತ್ತಾರೆ. ಅದರ ತುಂಬೆಲ್ಲಾ ಪ್ಯಾಡ್ ಗಳು ತುಂಬಿರುತ್ತವೆ. ತರುಣ್ ಹಳ್ಳಿಗಳಲ್ಲಿನ ಮಹಿಳೆಯರು ಮತ್ತು ಶಾಲಾ ಬಾಲಕಿಯರಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುತ್ತಾರೆ. ಹಾಗೂ ಅವರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುತ್ತಾರೆ.

ಅದರಲ್ಲೂ ಮುಖ್ಯವಾಗಿ ತರುಣ್, ಮಹಿಳೆಯರು ಮತ್ತು ಬಾಲಕಿಯರಿಗೆ ಸಸಿ ನೆಡುವಂತೆ ಒತ್ತಾಯಿಸುತ್ತಾರೆ. ಇದು ಕಳೆದ ಐದಾರು ವರ್ಷಗಳಿಂದ ನಡೆಯುತ್ತಿರುವ ಅಭಿಯಾನವಾಗಿದ್ದು, ಒಂದು ಪ್ಯಾಡ್‌ಗೆ ಒಂದು ಗಿಡ ಎಂಬ ನಿರ್ಣಯದ ಪರಿಣಾಮವಾಗಿ, ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ.

ಸರ್ಕಾರ ಅಥವಾ ಯಾವುದೇ ದಾನಿ ಸಂಸ್ಥೆಯಿಂದ ಯಾವುದೇ ಬೆಂಬಲವಿಲ್ಲದೆ ಕ್ರೌಡ್‌ಫಂಡಿಂಗ್ ಮಾದರಿಯಲ್ಲಿ ತರುಣ್ ಈ ಅಭಿಯಾನವನ್ನು ನಡೆಸುತ್ತಿದ್ದಾರೆ. ಒಮ್ಮೆ ಜೆಮ್‌ಶೆಡ್‌ಪುರದ ಗ್ರಾಮೀಣ ಪ್ರದೇಶದ ಶಾಲೆಯೊಂದರಲ್ಲಿ ಬಾಲಕಿಯರೊಂದಿಗೆ ತರುಣ್ ಸಂವಹನ ನಡೆಸುತ್ತಿದ್ದರು. ಈ ವೇಳೆ ಬಾಲಕಿಯೊಬ್ಬಳು ತರಗತಿ ಕೊಠಡಿಯಿಂದ ಹೊರಬಂದಿದ್ದಾಳೆ. ಋತುಸ್ರಾವದ ಕಾರಣದಿಂದ ಅವಳು ಅಸ್ವಸ್ಥಳಾಗಿದ್ದಳು. ಅಲ್ಲದೆ ಆಕೆಗೆ ಆ ಶಾಲೆಯಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡ ತರುಣ್ ದೃಢ ನಿರ್ಧಾರ ಕೈಗೊಂಡರು. ಮುಟ್ಟಿನ ಸುತ್ತಲಿನ ನಿಷೇಧವನ್ನು ಮುರಿಯಲು ಅವರು ನಿರ್ಧರಿಸಿದ್ರು. ವಿಶೇಷವಾಗಿ ಗ್ರಾಮೀಣ ಮಹಿಳೆಯರಲ್ಲಿ ಈ ನೈಸರ್ಗಿಕ ವಿದ್ಯಮಾನದ ಬಗ್ಗೆ ಅವರಿಗೆ ಅರಿವು ಮೂಡಿಸಲು, ಅವರು ಚುಪ್ಪಿ ಟೋಡೊ (ಮೌನವನ್ನು ಮುರಿಯಿರಿ) ಅಭಿಯಾನವನ್ನು ಪ್ರಾರಂಭಿಸಿದ್ರು.

2017 ರಲ್ಲಿ, ತರುಣ್ ನಿಶ್ಚಯ್ ಫೌಂಡೇಶನ್ ಅನ್ನು ಸ್ಥಾಪಿಸಿದರು. ನಿಧಾನವಾಗಿ ಅನೇಕ ಜನರು ಸ್ವಯಂಪ್ರೇರಣೆಯಿಂದ ಈ ಅಭಿಯಾನಕ್ಕೆ ಸೇರಿಕೊಂಡಿದ್ದಾರೆ. ಹಳ್ಳಿಗಳಾದ್ಯಂತ ಸಂಚರಿಸಿ ಮಹಿಳೆಯರು ಮತ್ತು ಶಾಲಾ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಅವರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...