ಪುಣೆ: ಹೆಣ್ಣೆಂದರೆ ಅಸಡ್ಡೆ, ಭ್ರೂಣ ಹತ್ಯೆ ಮಾಡುವ ಈ ಸಮಾಜದಲ್ಲಿ ನಿಧಾನವಾಗಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಇಲ್ಲೊಂದೆಡೆ ಹೆಣ್ಣು ಮಗು ಹುಟ್ಟಿದ ಖುಷಿಗೆ ಕಂದನನ್ನು ಹೆಲಿಕಾಪ್ಟರ್ ನಲ್ಲಿ ಮನೆಗೆ ಕರೆತರಲಾಗಿದೆ.
ಹೆಣ್ಣು ಮಗುವಿನ ಜನನದ ಸಂಭ್ರಮದಲ್ಲಿರುವ ಮಹಾರಾಷ್ಟ್ರದ ಪುಣೆಯಲ್ಲಿ, ಕುಟುಂಬವೊಂದು ಹೆಲಿಕಾಪ್ಟರ್‌ನಲ್ಲಿ ಮಗುವನ್ನು ಮನೆಗೆ ಕರೆತರುವ ಮೂಲಕ ಅದ್ಧೂರಿ ಸ್ವಾಗತ ಕೋರಿದೆ.
ಪುಣೆಯ ಹೊರವಲಯದಲ್ಲಿರುವ ಬಾಲೆವಾಡಿ ಪ್ರದೇಶದ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಕುಟುಂಬವು ತಮ್ಮ ಹೊಸ ಸದಸ್ಯೆ ಕ್ರುಶಿಕಾಗೆ ಭವ್ಯವಾದ ಸ್ವಾಗತ ನೀಡಿದೆ. ಸಮೀಪದ ಶೆವಾಲ್ ವಾಡಿಯಲ್ಲಿರುವ ಅಜ್ಜಿಯ ಮನೆಯಿಂದ ಮಗು ಮತ್ತು ತಾಯಿಯನ್ನು ಮನೆಗೆ ಕರೆತರುವ ವೇಳೆ ಹೆಲಿಕಾಪ್ಟರ್ ಅನ್ನು ಬುಕ್ ಮಾಡಿದೆ
ತನ್ನ ಹೊಸ ಸದಸ್ಯರನ್ನು ಸ್ವಾಗತಿಸಲು ಇಡೀ ಕುಟುಂಬವು ಒಟ್ಟುಗೂಡಿದ ಸಂತೋಷದ ಸಂದರ್ಭದ ಫೋಟೋಗಳನ್ನು ಎನ್ಐಎ ಹಂಚಿಕೊಂಡಿದೆ. ಹೆಣ್ಣು ಮಗುವನ್ನು ಸ್ವಾಗತಿಸಲು ಪಟಾಕಿ ಕೂಡ ಸಿಡಿಸಲಾಗಿದೆ.
ಚಿತ್ರಗಳು ವೈರಲ್ ಆಗಿದ್ದು, ಹೆಣ್ಣು ಮಗುವಿನ ಜನನವನ್ನು ಅದ್ಭುತ ರೀತಿಯಲ್ಲಿ ಆಚರಿಸಿದ್ದಕ್ಕಾಗಿ ನೆಟ್ಟಿಗರು ಕುಟುಂಬವನ್ನು ಶ್ಲಾಘಿಸಿದೆ.
ಇದೇ ರೀತಿಯ ಘಟನೆಯಲ್ಲಿ, ಪುಣೆಯ ಶೆಲ್ಗಾಂವ್ ಮೂಲದ ಕುಟುಂಬವು ಇತ್ತೀಚೆಗೆ ನವಜಾತ ಹೆಣ್ಣು ಮಗುವಿಗೆ ಭವ್ಯವಾಗಿ ಸ್ವಾಗತ ಕೋರಿತ್ತು. ಈ ಕುಟುಂಬ ಕೂಡ ಮಗುವನ್ನು ಹೆಲಿಕಾಪ್ಟರ್ ನಲ್ಲಿ ಮನೆಗೆ ಕರೆತಂದಿತ್ತು. ಇದಕ್ಕಾಗಿ ಕುಟುಂಬ 1 ಲಕ್ಷ ರೂ. ಖರ್ಚು ಮಾಡಿತ್ತು.