ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ಬಿಎಂಟಿಸಿಯಲ್ಲಿ ಕೆಲಸ ಮಾಡುವ ಶೇ.50ರಷ್ಟು ಸಿಬ್ಬಂದಿಗಳು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವರದಿ ಕೂಡ ಬಂದಿತ್ತು. ಹೃದಯ ಸಂಬಂಧಿ ಕಾಯಿಲೆಗಳಿಂದ ಪಾರಾಗುವ ಹಾಗೂ ಆರೋಗ್ಯವಂತರಾಗಿ, ಯಾವುದೇ ಸಮಸ್ಯೆಗಳಿಲ್ಲದೇ ಜೀವನ ಸಾಗಿಸುವ ಕ್ರಮ ಹೇಗೆ ಎಂಬ ಬಗ್ಗೆ ಡಾ. ರಾಜು ಕಾರ್ಯಾಗಾರವೊಂದನ್ನು ಆಯೋಜಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಜನರಲ್ಲಿ ಆರೋಗ್ಯಸಮಸ್ಯೆಗಳು ಹೆಚ್ಚುತ್ತಿವೆ. ಕೇವಲ ಹೃದಯಾಘಾತ ಸಮಸ್ಯೆ ಮಾತ್ರವಲ್ಲ, ಸ್ಟ್ರೋಕ್, ಡಯಾಬಿಟಿಸ್, ಹೈಪರ್ ಟೆನ್ ಶನ್, ಬಿಪಿ, ಡಿಪ್ರೆಶನ್, ತಲೆ ಸುಸ್ತು, ಅತಿಯಾದ ಸುಸ್ತು, ಮೈಕೈ ನೋವು ಸೇರಿದಂತೆ ಅನೇಕ ಕೇಸ್ ಗಳ ಸಂಖ್ಯೆ ಜಾಸ್ತಿಯಾಗಿದೆ.
ಹಾಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಿರುವ ಆರೋಗ್ಯ ಸಮಸ್ಯೆಗಳಿಂದ ಪಾರಾಗುವ ನಿಟ್ಟಿನಲ್ಲಿ ಹಾಗೂ ಮುಂದೆ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಳ್ಳವುದು ಹೇಗೆ ಎಂಬ ಮಾಹಿತಿ ನೀಡಲು ಕಾರ್ಯಾಗಾರ ನಡೆಸಲು ಉದ್ದೇಶಿಸಿದ್ದಾಗಿ ಡಾ.ರಾಜು ತಿಳಿಸಿದ್ದಾರೆ.
ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವವರು 8073519272 ಈ ಸಂಖ್ಯೆಗೆ ವಾಟ್ಸಪ್ ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಿರಿ. ಡಾ.ರಾಜು ಅವರ ಆರೋಗ್ಯ ಸಲಹೆ ಕುರಿತ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.