ಪದೇ ಪದೇ ಮಾರುಕಟ್ಟೆಗೆ ಹೋಗಿ ದಿನಸಿ ತರಲು ಇಷ್ಟಪಡದವರು ಒಮ್ಮೆಲೆ ಹೆಚ್ಚಿನ ದಿನಸಿ ತಂದಿದ್ದೀರಾ….? ಆದರೆ ಬಹಳ ದಿನ ಇಟ್ಟರೆ ಕೆಲವೊಂದು ದಿನಸಿಗೆ ಹುಳು ಹಿಡಿಯುವುದು ಸಾಮಾನ್ಯ, ದುಬಾರಿ ಕಾಲದ ಈ ದಿನಗಳಲ್ಲಿ ದಿನಸಿ ವಸ್ತುಗಳನ್ನು ಹಾಳಾಗದಂತೆ ರಕ್ಷಿಸುವುದನ್ನು ಕಲಿಯಬೇಕು.
ದ್ವಿದಳ ಧಾನ್ಯಗಳು ಹಾಳಾಗದಂತೆ, ಅದಕ್ಕೆ ಹುಳ ಬರದಂತೆ ನೋಡಿಕೊಳ್ಳಲು ಅವುಗಳನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿ. ಗಾಳಿಯಾಡದ ಡಬ್ಬದಲ್ಲಿ ತೇವಾಂಶವಿರದಂತೆ ನೋಡಿಕೊಳ್ಳಿ. ಮೊದಲು ಹತ್ತಿ ಬಟ್ಟೆಯಲ್ಲಿ ಡಬ್ಬವನ್ನು ಒರೆಸಿ ನಂತ್ರ ಧಾನ್ಯಗಳನ್ನು ಹಾಕಿ. ಬೇವಿನ ಎಲೆಗಳನ್ನು ಅದಕ್ಕೆ ಹಾಕಿದ್ರೆ ಹುಳ ಬರುವುದಿಲ್ಲ.
ಹಿಟ್ಟುಗಳನ್ನು ರಕ್ಷಿಸಲು ಈರುಳ್ಳಿ ಅಥವಾ ಹುರಿದ ಕೆಂಪು ಮೆಣಸಿನ ಕಾಯಿಯನ್ನು ಹಾಕಬಹುದು.
ರವೆಗೆ ಹುಳ ಬೇಗ ಕಾಣಿಸಿಕೊಳ್ಳುತ್ತದೆ. ಒಂದು ಪ್ಯಾನ್ ಗೆ ರವೆ ಹಾಕಿ ಹುರಿಯಿರಿ. ತುಪ್ಪ ಅಥವಾ ಎಣ್ಣೆಯನ್ನು ಅದಕ್ಕೆ ಸೇರಿಸಬೇಡಿ. ಹುರಿದ ರವೆ ತಣ್ಣಗಾದ ಮೇಲೆ ಅದನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ.