ತರಕಾರಿ ಹಣ್ಣು ಹಂಪಲುಗಳ ಬೆಲೆ ಗಗನಕ್ಕೇರಿದೆ. ಸಂಬಳದಲ್ಲಿ ಮಾತ್ರ ಏರಿಕೆಯಾಗಿಲ್ಲ. ಹೀಗಾದರೆ ದಿನ ಕಳೆಯುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ, ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್ ಗಳು
ಬೇಸಿಗೆಯಲ್ಲಿ ಆರೋಗ್ಯ ವೃದ್ಧಿಸುವ ಎಳನೀರು, ಲಿಂಬೆ, ಕಿವಿ, ಚಿಕ್ಕು, ಬಾಳೆಹಣ್ಣುಗಳ ದರ ದುಪ್ಪಟ್ಟಾಗಿದೆ. ಇವುಗಳ ಬದಲು ಇವೇ ಪೋಷಕಾಂಶಗಳನ್ನು ಒದಗಿಸುವ ಇತರ ಆಹಾರಗಳೆಂದರೆ ಹಾಲು ಹಾಗು ಹಾಲಿನ ಇತರ ಉತ್ಪನ್ನಗಳು. ಕೊರೋನಾ ಬಳಿಕ ಇವುಗಳ ದರದಲ್ಲಿ ಏರಿಕೆಯಾಗಿಲ್ಲ. ಹಾಗಾಗಿ ತುಪ್ಪ, ಮೊಸರನ್ನು ಹೆಚ್ಚು ಸೇವಿಸಿ.
ಹಲವು ಪೋಷಕಾಂಶಗಳನ್ನು ಒಳಗೊಂಡಿರುವ ಪಪಾಯ ಹಣ್ಣನ್ನು ಸೇವಿಸಿ. ಇದರಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಎ ಮತ್ತು ಸಿ ಇದ್ದು ಫಾಲಿಕ್ ಆಸಿಡ್ ಅನ್ನು ಕೂಡಾ ದೇಹಕ್ಕೆ ಒದಗಿಸುತ್ತದೆ.
ನಿಂಬೆ ಬದಲಿಗೆ ಒಣ ನೆಲ್ಲಿ ಬಳಸಿ, ಇದು ಪ್ಯಾಕೆಟ್ ಗಳಲ್ಲಿ ಹಿಂದಿನ ದರಕ್ಕೆ ಲಭ್ಯವಿದೆ. ಸೀಸನ್ ನಲ್ಲಿ ಸಿಗುವ ಮಾವಿನಹಣ್ಣಿನ ದರ ಕೈಗೆಟಕುವಂತಿರುತ್ತದೆ. ಹಾಗಾಗಿ ಇದನ್ನು ಸೇವಿಸಿ. ಪೇರಳೆ, ಹಲಸಿನಕಾಯಿ ದರ ಹೆಚ್ಚಿಸಿಕೊಂಡಿಲ್ಲ. ಇವುಗಳು ನಿಮ್ಮ ಆಹಾರದಲ್ಲಿರಲಿ.