ದಾಂಪತ್ಯ ಜೀವನವು ದೀರ್ಘಕಾಲದವರೆಗೆ ಚೆನ್ನಾಗಿರಬೇಕು ಅಂದ್ರೆ ಪತಿ-ಪತ್ನಿಯರ ನಡುವೆ ವಿಶ್ವಾಸವಿರುವುದು ಬಹಳ ಮುಖ್ಯ. ನಂಬಿಕೆ, ವಿಶ್ವಾಸ ಇಲ್ಲದೇ ಇದ್ರೆ ಸಂಬಂಧ ಉಳಿಯೋದೇ ಕಷ್ಟವಾಗುತ್ತದೆ. ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಗಳಿಂದಾಗಿಯೇ ಪತಿ-ಪತ್ನಿ ಮಧ್ಯೆ ಬಿರುಕು ಮೂಡುತ್ತದೆ.
ಗಂಡ ಕಚೇರಿಗೆ ಹೋದ್ರೆ ಪತ್ನಿ ಮನೆಯನ್ನು ನಿಭಾಯಿಸ್ತಾರೆ. ಮನೆ ನಿಭಾಯಿಸಿಕೊಂಡು ಕೆಲಸಕ್ಕೂ ಹೋಗುವ ಗೃಹಿಣಿಯರು ಕೂಡ ಸಾಕಷ್ಟಿದ್ದಾರೆ. ಕೆಲವೊಮ್ಮೆ ಪತಿಯ ಮೇಲೆ ಪತ್ನಿಗಿರುವ ಅನುಮಾನವೇ ಅವರ ಸಂಬಂಧಕ್ಕೆ ಮುಳ್ಳಾಗಬಹುದು. ಅಷ್ಟಕ್ಕೂ ಇಂತಹ ಅನುಮಾನ ಬರುವುದ್ಯಾಕೆ? ಅದಕ್ಕೇನು ಕಾರಣ ಅನ್ನೋದನ್ನು ನೋಡೋಣ.
ಗಂಡ ದಿನವಿಡೀ ಕೆಲಸಕ್ಕೆ ಹೋದ್ರೆ ಇಬ್ಬರೂ ಸುಮಾರು 10 ಗಂಟೆಗಳ ಕಾಲ ದೂರ ದೂರವಿರ್ತಾರೆ. ಈ ಬೇರ್ಪಡುವಿಕೆ ಕೂಡ ಅನುಮಾನಕ್ಕೆ ಕಾರಣವಾಗಬಹುದು. ನೀವು ಮದುವೆಯಾಗಿ ವರ್ಷಗಳೇ ಕಳೆದಿದ್ದರೂ ಗಂಡ-ಹೆಂಡತಿ ಮಧ್ಯೆ ಸಂಭಾಷಣೆ ನಡೆಯುವುದು ಬಹಳ ಮುಖ್ಯ. ಏನಾದರೂ ಸಮಸ್ಯೆಯಿದ್ದರೆ ಮಾತಿನ ಮೂಲಕ ಬಗೆಹರಿಸಿಕೊಳ್ಳಬೇಕು. ಬ್ಯುಸಿ ಲೈಫ್ನಿಂದಾತಿ ಪತಿ, ಪತ್ನಿಯೊಂದಿಗೆ ಕಡಿಮೆ ಮಾತನಾಡಿದ್ರೆ ಸಂಬಂಧ ಹಳಸುವುದು ಖಂಡಿತ.
ಗೆಳೆತನ ಮದುವೆಯ ನಂತರವೂ ಉಳಿಯುವ ಸಂಬಂಧ. ಸಾಮಾನ್ಯವಾಗಿ ಗಂಡ ಪರಸ್ತ್ರೀಯೊಂದಿಗೆ ಆತ್ಮೀಯವಾಗಿ ಮಾತನಾಡಿದ್ರೆ ಹೆಂಡತಿಗೆ ಅಸೂಯೆಯಾಗುತ್ತದೆ. ಇದರಿಂದಾಗಿ ಜಗಳಗಳು ಹೆಚ್ಚಾಗುತ್ತವೆ. ಪತ್ನಿ ತನಗೆ ಎಲ್ಲಾ ಸ್ನೇಹಿತರಿಗಿಂತ ಹೆಚ್ಚು ಎಂಬುದನ್ನು ದೃಢಪಡಿಸುವುದು ಮುಖ್ಯ. ಪತಿ ಮನೆಗೆ ಬಂದೊಡನೆ ತನ್ನೊಂದಿಗೆ ಮಾತನಾಡಬೇಕು, ತನಗೆ ಗುಣಮಟ್ಟದ ಸಮಯ ನೀಡಬೇಕೆಂದು ಪತ್ನಿ ಬಯಸುತ್ತಾಳೆ.
ಹಾಗಾಗಿ ಪುರುಷರು ಮೊಬೈಲ್ನಲ್ಲೇ ಹೆಚ್ಚು ಸಮಯ ಕಳೆಯುವುದನ್ನು ಬಿಟ್ಟು ಹೆಂಡತಿಯೊಂದಿಗೆ ಮಾತನಾಡುವುದು ಉತ್ತಮ. ಪುರುಷರು ತಮ್ಮ ಸೆಲ್ ಫೋನ್ ನೋಡಿ ನಗುತ್ತಿದ್ದರೆ, ಹೆಂಡತಿಯ ಅನುಮಾನವು ಹಲವಾರು ಪಟ್ಟು ಹೆಚ್ಚಾಗುತ್ತದೆ. ಅದಕ್ಕಾಗಿಯೇ ಫೋನ್ನಲ್ಲಿ ಹೆಚ್ಚು ಸಮಯ ಕಳೆಯಬೇಡಿ. ನೀವು ಮದುವೆಗೆ ಮೊದಲು ಅನೇಕ ಸಂಬಂಧಗಳನ್ನು ಹೊಂದಿರಬಹುದು.
ನೀವು ಹೆಂಡತಿಯೊಂದಿಗೆ ಕುಳಿತಾಗಲೆಲ್ಲಾ ನಿಮ್ಮ ಮಾಜಿ ಗೆಳತಿಯ ಬಗ್ಗೆ ಮಾತನಾಡದಿರುವುದು ಉತ್ತಮ. ಇಲ್ಲದಿದ್ದರೆ ಅವಳೇ ನಿಮ್ಮ ಮನಸ್ಸಿನಲ್ಲಿದ್ದಾಳೆ ಎಂಬ ಭಾವನೆ ಬರುತ್ತದೆ. ಇದು ಮಹಿಳೆಯರ ಹೃದಯದಲ್ಲಿ ಅನುಮಾನವನ್ನು ಸೃಷ್ಟಿಸಲು ದೊಡ್ಡ ಕಾರಣವಾಗಿದೆ.