ವಿಲಕ್ಷಣ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಸ್ಮರಣಶಕ್ತಿ ಕಳೆದುಕೊಂಡಿರುವ ದಿಗ್ಭ್ರಮೆಗೊಳಿಸುವ ಘಟನೆ ನಡೆದಿದೆ.
ವರದಿ ಪ್ರಕಾರ, ಐರಿಶ್ ವ್ಯಕ್ತಿ ಮಧ್ಯಾಹ್ನ ತನ್ನ ಹೆಂಡತಿಯೊಂದಿಗೆ ಸಂಭೋಗ ನಡೆಸಿದ ನಂತರ ಅಲ್ಪಾವಧಿಯ ಸ್ಮರಣೆ ಕಳೆದುಕೊಂಡಿದ್ದಕ್ಕಾಗಿ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಸಲಾಯಿತು.
66 ವರ್ಷದ ವ್ಯಕ್ತಿ ತನ್ನ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 10 ನಿಮಿಷಗಳಲ್ಲಿ ಅಲ್ಪಾವಧಿಯ ಸ್ಮರಣೆಯನ್ನು ಕಳೆದುಕೊಂಡಿದ್ದಾನೆ. ಸಂಭೋಗದ ನಂತರ ವ್ಯಕ್ತಿಯು ಎರಡು ದಿನಗಳ ಹಿಂದಿನ ಸ್ಮರಣೆಯನ್ನು ಕಳೆದುಕೊಂಡಿದ್ದಾನೆ.
ಈ ರೀತಿಯ ಅಲ್ಪಾವಧಿಯ ಮೆಮೊರಿ ನಷ್ಟವನ್ನು ಟ್ರಾನ್ಸಿಯೆಂಟ್ ಗ್ಲೋಬಲ್ ವಿಸ್ಮೃತಿ (ಟಿಜಿಎ) ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಕಂಡುಬರುತ್ತದೆ.
ವರದಿಯ ಪ್ರಕಾರ, ವ್ಯಕ್ತಿಯು ನೆನಪಿನ ತೊಂದರೆ ಪ್ರಾರಂಭವಾಗುವ 10 ನಿಮಿಷಗಳ ಮೊದಲು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾನೆ. ಒಂದು ದಿನದ ಹಿಂದೆ ತನ್ನ ಹೆಂಡತಿ ಮತ್ತು ಕುಟುಂಬದೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದನ್ನು ಸಂಪೂರ್ಣವಾಗಿ ಮರೆತಿದ್ದಾನೆ. ಅಲ್ಲದೆ, ಆ ಮುಂಜಾನೆಯ ಅಥವಾ ಹಿಂದಿನ ರಾತ್ರಿಯ ಆಚರಣೆಗಳ ಬಗ್ಗೆ ಅವನಿಗೆ ನೆನಪಿರಲಿಲ್ಲ.
ಈ ವ್ಯಕ್ತಿಯು ಈ ಹಿಂದೆ ಕೂಡ ಅಂದ್ರೆ 2015 ರಲ್ಲಿ ಇದೇ ರೀತಿಯ ಘಟನೆಯಲ್ಲಿ ಟಿಜಿಎ ಅನುಭವಿಸಿದ್ದರು. ಲೈಂಗಿಕ ಸಂಭೋಗದ ನಂತರ ಈತ ಅಲ್ಪಾವಧಿಯ ಸ್ಮರಣೆಯನ್ನು ಕಳೆದುಕೊಂಡಿದ್ದನು. 2022 ಮತ್ತು 2015 ರ ಎರಡೂ ಘಟನೆಗಳಲ್ಲಿ, ಸ್ವಲ್ಪ ಸಮಯದ ನಂತರ ವ್ಯಕ್ತಿಯು ತನ್ನ ಅಲ್ಪಾವಧಿಯ ಸ್ಮರಣೆಯನ್ನು ಮರಳಿ ಪಡೆದಿದ್ದಾನೆ.