ಹೆತ್ತ ತಂದೆ-ತಾಯಿಯನ್ನು ನೋಡಿಕೊಳ್ಳದೇ ಸಂಧ್ಯಾಕಾಲದಲ್ಲಿ ಹಿರಿಜೀವಗಳನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಮಕ್ಕಳೆ ಹೆಚ್ಚಾಗಿ ಕಂಡು ಬರುತ್ತಿರುವ ಇಂದಿನ ದಿನಮಾನಗಳಲ್ಲಿ ಹಿರಿಯರನ್ನು ಪ್ರೀತಿ, ಗೌರವ, ಆದರದಿಂದ ಕಾಣುವ ಮಕ್ಕಳು ಕೂಡ ಇದ್ದಾರೆ ಎಂಬುದಕ್ಕೆ ಈ ದೃಶ್ಯ ಸಾಕ್ಷಿ.
ಮಗ-ಸೊಸೆ ತಾವು ಕಟ್ಟಿಸಿದ ಹೊಸ ಮನೆಗೆ ತಾಯಿಯನ್ನು ಬರಮಾಡಿಕೊಂಡ ರೀತಿ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಸೊಸೆ ಹಾಗೂ ಮಗನ ಪ್ರೀತಿ ಕಂಡು ಹಿರಿಜೀವದ ಕಣ್ಣಂಚಲ್ಲಿ ಆನಂದ ಬಾಷ್ಪ…….ಜೀವನದ ಸಾರ್ಥಕತೆಯ ಭಾವ… ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಹಿರಿಯರನ್ನು ತಿರಸ್ಕಾರದಿಂದ ಕಾಣುವ ಇಂದಿನ ಮಕ್ಕಳಿಗೆ ಮಾದರಿಯಾಗಿದೆ ಈ ದೃಶ್ಯ.