alex Certify ಹೃದಯಾಘಾತ ತಡೆಯಬಲ್ಲದು ಈ ಆರೋಗ್ಯಕರ ಎಣ್ಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತ ತಡೆಯಬಲ್ಲದು ಈ ಆರೋಗ್ಯಕರ ಎಣ್ಣೆ

ಆಲಿವ್ ಆಯಿಲ್‌ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಹೃದಯವನ್ನು ಸುರಕ್ಷಿತವಾಗಿಡಲು ಈ ಎಣ್ಣೆಯು ತುಂಬಾ ಪ್ರಯೋಜನಕಾರಿ. ಈ ಎಣ್ಣೆಯನ್ನು ಸೇವಿಸುವುದರಿಂದ ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ.

ಆಲಿವ್‌ ಆಯಿಲ್‌ ಬಳಸುವುದರಿಂದ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಕೊಲೆಸ್ಟ್ರಾಲ್ ಅನ್ನು ಸಮತೋಲನದಲ್ಲಿಡುವುದರಿಂದ ಹೃದಯಾಘಾತದ ಅಪಾಯ ಸಹ ಕಡಿಮೆಯಾಗುತ್ತದೆ.

ಆಲಿವ್ ಎಣ್ಣೆಯಲ್ಲಿ ಅಪರ್ಯಾಪ್ತ ಕೊಬ್ಬಿನಾಮ್ಲಗಳು ಮತ್ತು ಪಾಲಿಫಿನಾಲ್ ಸಂಯುಕ್ತಗಳಿವೆ. ಇದು ಹೃದಯದ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡಬಲ್ಲದು. ಪ್ರತಿದಿನ ಅರ್ಧ ಟೀ ಚಮಚದಷ್ಟು ಆಲಿವ್ ಆಯಿಲ್‌ ಸೇವಿಸುವುದರಿಂದ ಹೃದಯ ರಕ್ತನಾಳಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುವುದಿಲ್ಲ.

ಒಮೆಗಾ-3 ಕೊಬ್ಬಿನಾಮ್ಲಗಳು ಈ ಎಣ್ಣೆಯಲ್ಲಿ ಕಂಡುಬರುತ್ತವೆ. ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಕಾರಿ. ಇದರ ಹೊರತಾಗಿ ಹೃದಯದ ಆರೋಗ್ಯ ಮತ್ತು ಕಾರ್ಯವನ್ನು ಸಹ ಸುಧಾರಿಸುತ್ತದೆ. ಆಲಿವ್‌ ಆಯಿಲ್‌ನಲ್ಲಿ ಹೆಚ್ಚಿನ ಪ್ರಮಾಣದ ಪಾಲಿಫಿನಾಲ್‌ ಇರುವುದರಿಂದ ಇದು ಉತ್ತಮ ಲಿಪಿಡ್ ಪ್ರೊಫೈಲ್‌ಗೆ ಸಹಾಯ ಮಾಡುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಆಲಿವ್ ಆಯಿಲ್‌ನಲ್ಲಿರುವ ಪಾಲಿಫಿನಾಲ್‌ಗಳು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತವೆ. ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ಆಲಿವ್‌ ಆಯಿಲ್‌ ಬಳಸುವುದು ಒಳ್ಳೆಯದು. ಇದರಲ್ಲಿರುವ ಪಾಲಿಫಿನಾಲ್‌ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.

ಈ ಎಣ್ಣೆಯಲ್ಲಿ ನೀವು ಅಡಿಗೆ ಮಾಡಿದ್ರೆ, ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಆಲಿವ್ ಎಣ್ಣೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಇ ಕೂಡ ಇದೆ. ಆಲಿವ್‌ ಆಯಿಲ್‌ನಿಂದ ಮಸಾಜ್‌ ಮಾಡಿದ್ರೆ ಕೂದಲು ಸಹ ದಟ್ಟವಾಗಿ ಬೆಳೆಯುತ್ತದೆ

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...