ಬೇವಿನ ಎಲೆಗಳಲ್ಲಿರೋ ಔಷಧೀಯ ಗುಣಗಳ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಬೇವಿನ ಎಲೆಗಳನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಹೃದಯವನ್ನು ಆರೋಗ್ಯವಾಗಿರಿಸುವುದರ ಜೊತೆಗೆ ಇನ್ನು ಹಲವಾರು ಕಾಯಿಲೆಗಳನ್ನು ನಮ್ಮಿಂದ ದೂರವಿಡುತ್ತದೆ. ಇದರ ಹೊರತಾಗಿಯೂ ಬೇವಿನ ಎಲೆಯಿಂದ ಹಲವು ಪ್ರಯೋಜನಗಳಿವೆ.
ಬೇವಿನ ಎಲೆಗಳನ್ನು ಕುಷ್ಠರೋಗಕ್ಕೂ ಮದ್ದಾಗಿ ಬಳಸಲಾಗುತ್ತದೆ. ಇದರ ಬಳಕೆಯಿಂದ ದೃಷ್ಟಿ ಚುರುಕಾಗುತ್ತದೆ. ಕರುಳು ಬೇನೆ, ಹೊಟ್ಟೆ ನೋವು, ಹಸಿವಾಗದಿರುವುದು, ಚರ್ಮದ ಹುಣ್ಣುಗಳಂತಹ ಕಾಯಿಲೆಗಳಿಗೂ ಬೇವಿನ ಎಲೆಯಿಂದ ಪರಿಹಾರ ಸಿಗುತ್ತದೆ.
ಬೇವಿನ ಎಲೆಗಳ ಬಳಕೆ ಹೇಗೆ..?
ಬೇವಿನ ಎಲೆಗಳನ್ನು ಕುದಿಸಿ ಅದರ ನೀರನ್ನು ಕುಡಿಯುವುದು ಉತ್ತಮ. ಇಲ್ಲದೇ ಹೋದರೆ ನೀವು ಬೇವಿನ ಎಲೆಗಳಿಂದ ಮಾಡಿದ ಚಹಾವನ್ನು ಸಹ ಸೇವನೆ ಮಾಡಬಹುದು. ಕುಡಿಯುವಾಗ ಕಹಿ ಎನಿಸಿ ಕಷ್ಟವಾದರೂ ಅದನ್ನು ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕಜ್ಜಿ, ತುರಿಕೆಯಂತಹ ಚರ್ಮ ಸಂಬಂಧಿ ಸಮಸ್ಯೆ ಇರುವವರು ಬೇವಿನ ಸೊಪ್ಪನ್ನು ಬಳಸಬೇಕು. ಬಿಸಿ ಬಿಸಿ ನೀರಿಗೆ ಬೇವಿನ ಸೊಪ್ಪನ್ನು ಹಾಕಿ ಸ್ನಾನ ಮಾಡಬಹುದು. ನಿಯಮಿತವಾಗಿ ಹೀಗೆ ಮಾಡುತ್ತ ಬಂದರೆ ಚರ್ಮದ ಅಲರ್ಜಿ ಸಮಸ್ಯೆ ಕೂಡ ಪರಿಹಾರವಾಗುತ್ತದೆ.