ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸುದ್ದಿ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಹೃದಯಾಘಾತಕ್ಕೆ ಕಾರಣವೇನು ? ಮಾನಸಿಕ ಒತ್ತಡ ಹೆಚ್ಚಾಗಿ ಹೃದಯಾಘಾತ ಸಂಭವಿಸುತ್ತದೆಯೇ? ಹೃದಯಾಘಾತವನ್ನು ತಡೆಯುವುದು ಹೇಗೆ ಎಂಬ ಹಲವಾರು ಪ್ರಶ್ನೆ, ಗೊಂದಲಗಳಿಗೆ ಉತ್ತರವಾಗಿ ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಮಾನಸಿಕ ಒತ್ತಡಕ್ಕೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಸ್ಟ್ರೆಸ್ ಅಥವಾ ಮಾನಸಿಕ ಒತ್ತಡದ ಕಾರಣಕ್ಕೆ ಹೃದಯಾಘಾತವಾಗುವುದಿದ್ದರೆ ಎಲ್ಲರೂ ಸಾಯಬೇಕಿತ್ತು. ಕಾರಣ ಮಾನಸಿಕ ಒತ್ತಡ ಒಂದಲ್ಲ ಒಂದು ಕಾರಣಕ್ಕೆ, ಒಂದಲ್ಲ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಎದುರಿಸಿರುತ್ತಾನೆ. ಹಾಗಾಗಿ ಹೃದಯಾಘಾತಕ್ಕೂ ಮಾನಸಿಕ ಒತ್ತಡಕ್ಕೂ ಸಂಬಂಧವಿಲ್ಲ. ಆದರೆ ಸ್ಟ್ರೆಸ್, ಮಾನಸಿಕ ಒತ್ತಡ ಅಥವಾ ಯಾವುದೇ ರೀತಿಯ ಭಾವನೆಗಳು ನಮ್ಮಲ್ಲಿ ಹೆಚ್ಚಾದಾಗ ಅದರಿಂದ ಅಪಾಯವಿದ್ದೇ ಇದೆ. ಒತ್ತಡ ಹೆಚ್ಚಾದಾಗ ದೇಹದ ಪ್ರತಿಯೊಂದು ಸೆಲ್ಸ್ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಟೇಕಾಫ್ ವೇಳೆಯಲ್ಲೇ ತಾಂತ್ರಿಕ ತೊಂದರೆ; ಇಂಡಿಗೋ ವಿಮಾನ ಹಾರಾಟ ಸ್ಥಗಿತ
ಹೃದಯದ ಆರೋಗ್ಯಕ್ಕೆ ಒಂದು ರೀತಿಯಲ್ಲಿ ಸ್ಟ್ರೆಸ್ ಅಗತ್ಯವಿದೆ. ಆದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಅತಿಯಾದ ಒತ್ತಡ ಹೃದಯದ ಆರೋಗ್ಯಕ್ಕೆ ಖಂಡಿತವಾಗಿಯೂ ಅಪಾಯಕಾರಿ…… ಒತ್ತಡ ಎಂಬ ಭಾವನೆಯನ್ನು ಸಂತೋಷ ಎಂಬ ಭಾವನೆಯ ಮೂಲಕ ರಿಪ್ಲೇಸ್ ಮಾಡಿದಾಗ ಅತಿಯಾದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ಒತ್ತಡವಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸಂತೋಷವಿದ್ದಾಗ ಹೃದಯದ ಆರೋಗ್ಯಕ್ಕೆ ಸಹಾಯಕಾರಿ. ಹಣ, ಅಂತಸ್ತುಗಳಿಂದ ಬರುವ ಸಂತೋಷ ಕ್ಷಣಿಕವಾದದ್ದು ಹಾಗೂ ಅಪಾಯಕಾರಿ. ಆದರೆ ಇನ್ನೊಬ್ಬರಿಗೆ ಸಹಾಯ ಮಾಡುವುದು, ತೊಂದರೆಯಲ್ಲಿದ್ದ ವ್ಯಕ್ತಿಗೆ ಸಣ್ಣ ನೆರವು, ಸಹಾಯ ಮಾಡುವುದರಿಂದ ಆಗುವ ಸಂತೋಷ ಯಾವತ್ತು ಆರೋಗ್ಯಕರವಾಗಿರುತ್ತದೆ ಎಂದು ಡಾ. ರಾಜು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ ಮೆಸೇಜ್ ಗೆ ಮಾತ್ರ ಸೀಮಿತವಾಗಿದೆ. ಜನರು ಹುಟ್ಟು ಹಬ್ಬ ಆಚರಣೆಗಾಗಿ ತಲೆ ಕೆಡಿಸಿಕೊಳ್ಳುವಷ್ಟು ಸ್ವಾತಂತ್ರ್ಯಾದಿನಾಚರಣೆಗಾಗಲಿ, ಧಾರ್ಮಿಕ ಆಚರಣೆಗಳಿಗಾಗಲಿ, ಹಬ್ಬಗಳಿಗಾಗಲಿ ತಲೆ ಕೆಡಿಸಿಕೊಳ್ಳಲ್ಲ. ಇಂದಿನ ಮಕ್ಕಳಿಗೆ ಹಬ್ಬಗಳ ಕುರಿತ ವಿಶೇಷತೆಯನ್ನು ಹೇಳುವ ಕೆಲಸವಾಗಬೇಕು. ನಮ್ಮ ಸಂಸ್ಕೃತಿ, ಆಚಾರ ವಿಚಾರ, ಆಚರಣೆಗಳ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡಬೇಕು. ದುರದೃಷ್ಟಕರ ಸಂಗತಿ ಎಂದರೆ ಇತ್ತೀಚೆಗೆ ಹಬ್ಬದಂತಹ ಸಂದರ್ಭದಲ್ಲಿ ಮನೆಗಳಲ್ಲಿ, ದೇವಾಲಯಗಳಗೆ ಹೋಗುವುದಕ್ಕಿಂತಲು ಹೆಚ್ಚು ಜನರು, ಪಬ್, ಬಾರ್ ರೆಸ್ಟೋರೆಂಟ್ ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಬದಲಾವಣೆಯೇ ಇಂದು ಕೋವಿಡ್, ಕ್ಯಾನ್ಸರ್, ಅಪಾಯಕಾರಿ ರೋಗಗಳಿಗೆ ತುತ್ತಾಗಿ ಜನ ಸಾವನ್ನಪ್ಪಲು ಕಾರಣವಾಗಿದೆ. ಇಂತಹ ಅಸಂಸ್ಕೃತಿ ಕಡಿಮೆಯಾಗಬೇಕಾಗಿದೆ ಎಂದು ತಿಳಿಸಿದ್ದಾರೆ.