ಬೇಕಿಂಗ್ ಸೋಡಾ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಏಕೆಂದರೆ ಇದನ್ನು ಅನೇಕ ವಿಧದ ಕೇಕ್‌ಗಳು, ಬ್ರೆಡ್ ಮತ್ತು ಇತರ ಬೇಕರಿ ಉತ್ಪನ್ನಗಳಲ್ಲಿ, ಹೋಟೆಲ್ ತಿನಿಸುಗಳಲ್ಲಿ ಬಳಸಲಾಗುತ್ತದೆ. ಬೇಕಿಂಗ್ ಸೋಡಾ ಬೆರೆಸುವುದರಿಂದ ಆಹಾರವನ್ನು ನಯಗೊಳಿಸುವುದು ಸುಲಭವಾಗುತ್ತದೆ. ಕೆಲವರು ಸೋಡಾ ಬೆರೆಸಿದ ನೀರನ್ನು ಕುಡಿಯಲು ಇಷ್ಟಪಡುತ್ತಾರೆ.
ಅಡುಗೆ ಸೋಡಾವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅದು ಕೆಟ್ಟದ್ದಲ್ಲ. ಆದರೆ ಅದನ್ನು ಅತಿಯಾಗಿ ತಿನ್ನುವುದು ಹಾನಿಕಾರಕ. ಅಡುಗೆ ಸೋಡಾವನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹದ ಮೇಲೆ ಅನೇಕ ರೀತಿಯ ದುಷ್ಪರಿಣಾಮಗಳಾಗುತ್ತವೆ.
ಗ್ಯಾಸ್ಟ್ರಿಕ್: ಹೆಚ್ಚು ಅಡುಗೆ ಸೋಡಾವನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ವಾಯು ಅಥವಾ ಹೊಟ್ಟೆ ಉಬ್ಬರಿಸುವಿಕೆಗೆ ಕಾರಣವಾಗುತ್ತದೆ. ಸೋಡಾವನ್ನು ಸೇವಿಸಿದಾಗ, ಅದು ರಾಸಾಯನಿಕ ಪ್ರಕ್ರಿಯೆಯ ಅಡಿಯಲ್ಲಿ ಆಮ್ಲದೊಂದಿಗೆ ಬೆರೆಯುತ್ತದೆ. ಹಾಗಾಗಿ ಅಡುಗೆ ಸೋಡಾವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
ಹೃದಯಾಘಾತ: ಅಡುಗೆ ಸೋಡಾದಲ್ಲಿ ಬಹಳಷ್ಟು ಸೋಡಿಯಂ ಕಂಡುಬರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಈ ವಸ್ತುವಿನ ಕಾರಣದಿಂದಾಗಿ ನಮ್ಮ ಹೃದಯದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತವೆ. ಬೇಕಿಂಗ್ ಸೋಡಾದ ಮಿತಿಮೀರಿದ ಸೇವನೆಯು ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು. ಹೆಚ್ಚು ಅಡುಗೆ ಸೋಡಾ ತಿನ್ನುವವರು ಹೃದಯ ಸ್ತಂಭನಕ್ಕೆ ತುತ್ತಾದ ಅನೇಕ ಪ್ರಕರಣಗಳಿವೆ. ಅದಕ್ಕಾಗಿಯೇ ಅವುಗಳ ಸೇವನೆಯನ್ನು ಕಡಿಮೆ ಮಾಡುವುದು ಬಹಳ ಮುಖ್ಯ.
ಅಡುಗೆ ಸೋಡಾವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?
ನಿಮಗೆ ಜೀರ್ಣಕ್ರಿಯೆಯ ಸಮಸ್ಯೆ ಇದ್ದರೆ ಅರ್ಧ ಚಮಚ ಅಡುಗೆ ಸೋಡಾವನ್ನು ಅರ್ಧ ಕಪ್ ನೀರಿನಲ್ಲಿ ಬೆರೆಸಿ ಕುಡಿಯಿರಿ. ವಾರದಲ್ಲಿ 2 ಬಾರಿ ಮಾತ್ರ ಇದನ್ನು ಸೇವನೆ ಮಾಡಿ.