![article-image](https://gumlet.assettype.com/freepressjournal/2023-03/d46e4b9e-7b79-4a3d-a25b-77be1af8b786/WhatsApp_Image_2023_03_04_at_5_11_27_PM.jpeg)
ಮಹಾರಾಷ್ಟ್ರದಲ್ಲಿ ಈಗ 12ನೇ ತರಗತಿಯ ಬೋರ್ಡ್ ಎಗ್ಸಾಂ ನಡೆಯುತ್ತಿದೆ. ಸಾವಿರಾರು ಜನರು ಈ ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ ಗೀತಾಬಾಯಿ ಅನ್ನುವವರು ಕೂಡಾ ಒಬ್ಬರು.
ಬುರ್ಹಾನ್‌ಪುರದ ಸ್ಕೂಲ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿದ್ದ ಬೋರ್ಡ್ ಪರೀಕ್ಷೆ ಬರೆಯಲು 60 ಕಿ.ಮೀ ದೂರದ ಖಸ್ಟಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸ್‌ಘಾಟ್ ಗ್ರಾಮದ ನಿವಾಸಿ ಗೀತಾಬಾಯಿ 5 ತಿಂಗಳ ಮಗು ‘ನಿರಂಜನ್ ‘ನನ್ನ ಕರೆದುಕೊಂಡು ಬಂದಿದ್ದಾರೆ. ಆಕೆ ಪರೀಕ್ಷಾ ಕೊಠಡಿಗೆ ಹೋಗೋ ಮುನ್ನ ತನ್ನ ಜೊತೆಗೆ ಬಂದಿದ್ದ, ಸಹೋದರನ ಕೈಗೆ ಕೊಟ್ಟು ಹೋಗಿದ್ದಾಳೆ.
ಆಕೆ ಯಾವಾಗ ಪರೀಕ್ಷಾ ಕೊಠಡಿಯೊಳಗೆ ಹೋದ ಮೇಲೆ, ಮಗು ಅಳಲು ಆರಂಭಿಸುತ್ತೆ. ಅಲ್ಲೇ ಇದ್ದ ಉಷಾ ಶಂಖಪಾಲ್ ಅನ್ನೊರು ಈ ಮಗುವನ್ನ ಸಮಾಧಾನ ಮಾಡೋದಕ್ಕೆ ಪ್ರಯತ್ನಿಸುತ್ತಾರೆ. ಆಗ ಮದನ್‌ಲಾಲ್ ಕಾಜಲೆ ಅನ್ನೊ ವ್ಯಕ್ತಿ ಹಾಲಿನ ಬಾಟಲಿಯ ವ್ಯವಸ್ಥೆ ಮಾಡುತ್ತಾರೆ. ಅಲ್ಲಿದ್ದ ಇನ್ನೊರ್ವ ಮಹಿಳೆ ಲಾಲಿ ಹಾಡುತ್ತಾರೆ. ಆಗಲೇ ಮಗು ಶಾಂತವಾಗಿ ಮಲಗಿ ಬಿಡುತ್ತೆ.
ಗೀತಾಬಾಯಿ ಪರೀಕ್ಷೆ ಬರೆದು ಕೊಠಡಿಯಿಂದ ಹೊರಗೆ ಬಂದಾಗ, ಅಲ್ಲಿದ್ದವರೆಲ್ಲರೂ ಮಗುವನ್ನ ಸಮಾಧಾನ ಮಾಡುವುದಕ್ಕೆ ಪ್ರಯತ್ನಿಸೋದನ್ನ ನೋಡಿ ಭಾವುಕರಾಗುತ್ತಾರೆ. ಕೊನೆಗೆ ಅವರಿಗೆಲ್ಲ ಹೃದಯದಿಂದ ಧನ್ಯವಾದ ಹೇಳುತ್ತಾರೆ.
ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸುಮಾರು 38 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಹಾಲುಣಿಸುವ ಮಕ್ಕಳೊಂದಿಗೆ ತಾಯಂದಿರು ಸಹ ಪರೀಕ್ಷೆಗೆ ಬರುತ್ತಿದ್ದಾರೆ ಅನ್ನೋ ವಿಚಾರ ಮೊದಲೇ ಗೊತ್ತಿದ್ದರೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗುತ್ತಿತ್ತು ಎಂದು ಡಿಇಒ ಹೇಳಿದ್ದಾರೆ.
ಜಿಲ್ಲೆಯಲ್ಲಿ ಬೋರ್ಡ್ ಪರೀಕ್ಷೆಗೆ 38 ಕೇಂದ್ರಗಳನ್ನು ಸ್ಥಾಪಿಸಿರುವುದು ಗಮನಾರ್ಹ. ಹಾಲುಣಿಸುವ ಮಕ್ಕಳೊಂದಿಗೆ ಪರೀಕ್ಷೆಗೆ ಹಾಜರಾಗುವ ಮಹಿಳೆಯರಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳಲು ಈ ಕೇಂದ್ರಗಳಲ್ಲಿ ಯಾವುದೇ ವಿಶೇಷ ವ್ಯವಸ್ಥೆ ಇಲ್ಲ.