
ಈ ವೇಳೆ ಅವರು ತಮ್ಮ ಬಾಲ್ಯದ ಥ್ರೋಬ್ಯಾಕ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋ ಕೊಲಾಜ್ ಒಂದರಲ್ಲಿ ಅವರ ಅಜ್ಜಿ ಮತ್ತು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ಇದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಅವರ ಪತ್ನಿ ಸೋನಿಯಾ ಗಾಂಧಿ ಕೂಡ ಥ್ರೋಬ್ಯಾಕ್ ಫೋಟೋಗಳಲ್ಲಿ ಇದ್ದಾರೆ.
ರಾಹುಲ್ ಗಾಂಧಿ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಹಿಂದಿಯಲ್ಲಿ ಹೃತ್ಪೂರ್ವಕ ಟಿಪ್ಪಣಿಯನ್ನು ಬರೆದಿದ್ದಾರೆ. ಸಹೋದರ ಮತ್ತು ಸಹೋದರಿಯರ ಪವಿತ್ರ ಸಂಬಂಧದ ಅತ್ಯಂತ ಸುಂದರವಾದ ದಿನದಂದು, ರಾಖಿ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಕ್ಷಾಬಂಧನದ ಶುಭ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಪ್ರತಿಯೊಬ್ಬ ಸಹೋದರ ಸಹೋದರಿಯರ ನಡುವಿನ ಪ್ರೀತಿ ಶಾಶ್ವತವಾಗಿ ಉಳಿಯಲಿ ಎಂದು ತಾನು ಬಯಸುವುದಾಗಿ ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಈ ಮಧ್ಯೆ, ಪ್ರಿಯಾಂಕಾ ಗಾಂಧಿ ಕೂಡ ರಕ್ಷಾ ಬಂಧನದ ಕುರಿತು ಟ್ವಿಟ್ಟರ್‌ನಲ್ಲಿ ಹೃದಯಸ್ಪರ್ಶಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ತನ್ನ ಸಹೋದರನಂತೆಯೇ, ಅವರು ಕೂಡ ಹಿಂದಿನ ಕೆಲವು ಅಮೂಲ್ಯವಾದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಹಂಚಿಕೊಂಡ ಫೋಟೋ ಕೊಲಾಜ್ ತನ್ನ ಮದುವೆಯ ದಿನದ ಚಿತ್ರವನ್ನು ಸಹ ಒಳಗೊಂಡಿದೆ. ನಿಮ್ಮೆಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು. ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯ ಪವಿತ್ರ ಹಬ್ಬವೇ ರಾಖಿ ಹಬ್ಬ ಎಂದು ಪ್ರಿಯಾಂಕಾ ಗಾಂಧಿ ಶೀರ್ಷಿಕೆ ನೀಡಿದ್ದಾರೆ.