ಹೃದಯ ಅರೋಗ್ಯದಿಂದ ಕೆಲಸ ಮಾಡುತ್ತಿದ್ದರೆ ಮಾತ್ರ ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದು ಹೃದಯಾಘಾತವಾಗುವ ಮೊದಲು ಸೂಚನೆ ನೀಡುತ್ತದೆ. ಅವು ಹೀಗಿರುತ್ತವೆ.
ಮೊದಲನೆಯದಾಗಿ ಹೃದಯದಲ್ಲಿ ವಿಪರೀತ ಸುಸ್ತು ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ, ಎದೆ ಉರಿ ಮತ್ತು ಎದೆಭಾರ ಅನ್ನಿಸುತ್ತದೆ. ಎರಡನೆಯದಾಗಿ ಎಡಭಾಗದ ತೋಳಲ್ಲಿ ವಿಪರೀತ ನೋವು ಕಾಣಿಸಲು ಪ್ರಾರಂಭವಾಗುತ್ತದೆ.
ಮೂರನೆಯದಾಗಿ ಉಸಿರಾಟ ಸರಾಗವಾಗಿ ಆಗದೆ ಅಥವಾ ಹೃದಯ ಹಿಂಡಿದಂಥ ಅನುಭವವಾಗುತ್ತದೆ.
ನಾಲ್ಕನೆಯದಾಗಿ ಮೈ ಅನಗತ್ಯ ಬೆವರು ಹರಿಯುವಂತೆ ಮಾಡುತ್ತದೆ. ಅಗ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಐದನೆಯದಾಗಿ ಕೆಲವು ಬಾರಿ ಬೆನ್ನಿನ ಮೇಲ್ಮೈ ಮೇಲೆ ನೋವು ಕಾಣಿಸಿಕೊಳ್ಳುವ ಮೂಲಕ ಹೃದಯ ನಿಮಗೆ ಆಪತ್ತು ಇದೆ ಎಂದು ಎಚ್ಚರಿಸುವ ಸೂಚನೆಯನ್ನು ನೀಡುತ್ತದೆ.