ಸೂರ್ಯಕಾಂತಿ ಬೀಜದಲ್ಲಿ ಇರುವ ವಿಟಮಿನ್ ಸಿ, ಬಿ, ಮ್ಯಾಗ್ನೀಶಿಯಂ, ಐರನ್, ಪೊಟ್ಯಾಷಿಯಂ, ಜಿಂಕ್, ಫಾಸ್ಫರಸ್, ಪ್ರೊಟೀನ್, ಆರೋಗ್ಯಕರ ಫ್ಯಾಟ್ ಆಗಿರುವ ಮೊನೊ ಅನ್ ಸ್ಯಾಚುರೇಟೆಡ್ ಅಂಶವನ್ನು ಹೊಂದಿದೆ.
ಸೂರ್ಯಕಾಂತಿ ಬೀಜದಲ್ಲಿ ಇರುವ ವಿಟಮಿನ್ ಇ ಆಂಟಿ ಆಕ್ಸಿಡೆಂಟ್ ರೀತಿ ಕೆಲಸ ಮಾಡುತ್ತದೆ. ದೇಹದಲ್ಲಿ ಇರುವ ಫ್ರೀ
ರಾಡಿಕಲ್ಸ್ ವಿರುದ್ಧ ಹೋರಾಡುತ್ತದೆ. ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಸೂರ್ಯಕಾಂತಿ ಬೀಜವನ್ನು ತಿಂಡಿ ಜೊತೆಗೆ ಸೇವಿಸುವುದರಿಂದ ಮೊಡವೆ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ. ಸೂರ್ಯಕಾಂತಿ ಬೀಜವನ್ನು ಬ್ರೈನ್ ಫುಡ್ ಎಂದು ಕರೆಯುತ್ತಾರೆ. ಈ ಬೀಜ ಖಿನ್ನತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಉತ್ತಮವಾದ ನಿದ್ರೆಗೆ ಸಹಾಯ ಮಾಡುತ್ತವೆ.
ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯದಂತೆ ಈ ಬೀಜ ನೋಡಿಕೊಳ್ಳುತ್ತದೆ. ಇದರಲ್ಲಿ ಇರುವ ಮ್ಯಾಗ್ನೀಷಿಯಮ್ ಅಂಶವು ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ. ಸೂರ್ಯಕಾಂತಿ ಬೀಜದಲ್ಲಿ ಇರುವ ಕಾಫರ್ ಮತ್ತು ಜಿಂಕ್ ಅಂಶಗಳು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ.