
ಗೋಡಂಬಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಹಾಗೂ ಮಿನರಲ್ಸ್ ಗಳು ಅಧಿಕವಾಗಿವೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಗೋಡಂಬಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಹದ ತೂಕ ಇಳಿಕೆ ಮಾಡಿಕೊಳ್ಳುವವರು ನಿಯಮಿತವಾಗಿ ಗೋಡಂಬಿ ಸೇವಿಸುವುದು ಒಳ್ಳೆಯದು. ಹಿತಮಿತವಾಗಿ ಇದನ್ನು ಸೇವಿಸಿದರೆ ಇದರಿಂದ ನಮ್ಮ ದೇಹಕ್ಕೆ ಅದ್ಭುತ ಪ್ರಯೋಜನವನ್ನು ಪಡೆಯಬಹುದು.
ಗೋಡಂಬಿಯು ಹೃದಯದ ಆರೋಗ್ಯಕ್ಕೆ ಉಪಯೋಗ. ಇದರಲ್ಲಿ ಕೊಬ್ಬು ಇದ್ದರೂ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಗೋಡಂಬಿಯನ್ನು ತಿನ್ನುವುದರಿಂದ ಹೃದಯದ ಸ್ನಾಯುಗಳು ಬಲವಾಗುತ್ತದೆ.
ನಿತ್ಯ ಗೋಡಂಬಿ ಸೇವಿಸುವುದರಿಂದ ಮೂಳೆ ಕಾಯಿಲೆಗಳ ವಿರುದ್ಧ ರಕ್ಷಣೆ ಸಿಗುತ್ತದೆ. ಗೋಡಂಬಿಯಲ್ಲಿ ಸೇವನೆಯಿಂದ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬಾದಾಮಿ, ಗೋಡಂಬಿಗಳನ್ನು ಬೆಳಗ್ಗೆ ತಿಂಡಿಗೆ ಮುನ್ನ ತಿನ್ನುವುದರಿಂದ ದೇಹದ ತೂಕವನ್ನು ಇಳಿಸಿಕೊಂಡು ತೆಳ್ಳಗಾಗಬಹುದು.