ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಿನ ಕೆಲಸ. ಒತ್ತಡ, ಆಹಾರದಲ್ಲಿನ ವ್ಯತ್ಯಾಸದಿಂದ ಎದೆ ಉರಿ, ನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಂದು ಮನೆಮದ್ದಿನ ಮೂಲಕ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.
ಊಟಕ್ಕೆ ಮೊದಲು 1 ಟೇಬಲ್ ಸ್ಪೂನ್ ಆ್ಯಪಲ್ ಸೈಡರ್ ವಿನೇಗರ್ ಅನ್ನು ಒಂದು ಗ್ಲಾಸ್ ನೀರಿಗೆ ಹಾಕಿಕೊಂಡು ಕುಡಿಯಿರಿ. ಇದು ಗ್ಯಾಸ್ಟಿಕ್ ನಂತಹ ಸಮಸ್ಯೆಯನ್ನು ನಿವಾರಿಸುತ್ತದೆ. ಎದೆ ಉರಿಯನ್ನು ಕಡಿಮೆ ಮಾಡಿಕೊಳ್ಳುತ್ತದೆ.
ಗ್ಯಾಸ್ಟಿಕ್ ಸಮಸ್ಯೆಯಿಂದ ಕೂಡ ಈ ಎದೆ ನೋವು ಕಾಣಿಸಿಕೊಳ್ಳುತ್ತದೆ. ಬಿಸಿ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರೀಯೆ ವ್ಯವಸ್ಥೆ ಸರಿಯಾಗುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕೂಡ ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯ ಕಾಪಾಡುವಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಇದೊಂದು ಉತ್ತಮ ಮನೆ ಮದ್ದಾಗಿದೆ. ಬೆಳ್ಳುಳ್ಳಿಯ್ನನು ಜಜ್ಜಿ ತಿನ್ನುವುದರಿಂದ ಇದು ನಿಮ್ಮ ರಕ್ತನಾಳದ ಬ್ಲಾಕ್ ಗಳನ್ನು ನಿವಾರಿಸುತ್ತದೆ. ರಕ್ತ ಸರಾಗವಾಗಿ ಹರಿಯಲು ಇದು ಸಹಾಯ ಮಾಡುತ್ತದೆ.
*ದಾಳಿಂಬೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿರುತ್ತದೆ . ಇದರ ಜ್ಯೂಸ್ ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಗೇ ರಕ್ತನಾಳವನ್ನು ಆರೋಗ್ಯಯುತವಾಗಿರಿಸುತ್ತದೆ.