alex Certify ಹೃದಯದಲ್ಲಿ ಸಮಸ್ಯೆಯಿದ್ದಾಗ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಈ ರೋಗಲಕ್ಷಣಗಳು, ನಿರ್ಲಕ್ಷಿಸಿದ್ರೆ ಪ್ರಾಣಕ್ಕೇ ಅಪಾಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯದಲ್ಲಿ ಸಮಸ್ಯೆಯಿದ್ದಾಗ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಈ ರೋಗಲಕ್ಷಣಗಳು, ನಿರ್ಲಕ್ಷಿಸಿದ್ರೆ ಪ್ರಾಣಕ್ಕೇ ಅಪಾಯ….!

ಹೃದಯವು ನಮ್ಮ ದೇಹದ ಬಹಳ ಮುಖ್ಯ ಅಂಗವಾಗಿದೆ. ಹೃದಯ ಆರೋಗ್ಯವಾಗಿದ್ದರೆ ಮಾತ್ರ ನಾವು ದೀರ್ಘಕಾಲ ಬದುಕಬಹುದು. ಆರೋಗ್ಯವಾಗಿರಬಹುದು. ಹೃದಯದಲ್ಲಿ ಅಲ್ಪಸ್ವಲ್ಪ ತೊಂದರೆಯಾದರೂ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಹೃದಯದ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸಬೇಡಿ. ಹೃದಯದಲ್ಲಿ ಸಮಸ್ಯೆ ಉಂಟಾದಾಗ ದೇಹವು ಯಾವ ಸಂಕೇತಗಳನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಎದೆನೋವು ಅಥವಾ ಅಸ್ವಸ್ಥತೆಯ ಅನುಭವವಾದರೆ ಅದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಎದೆನೋವು ಕೂಡ ಹೃದಯಾಘಾತದ ಸಂಕೇತವಿರಬಹುದು.

ಹೃದ್ರೋಗ ಹೊಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ಹೃದಯದ ಸಮಸ್ಯೆಯಿಂದ ಅಜೀರ್ಣ ಮತ್ತು ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಹಾಗಾಗಿ ಮತ್ತೆ ಮತ್ತೆ ಈ ಸಮಸ್ಯೆ ಎದುರಾದರೆ ನಿರ್ಲಕ್ಷಿಸಬೇಡಿ.

ದೇಹದಲ್ಲಿ ಅಲ್ಪ ಸ್ವಲ್ಪ ನೋವು ಸಾಮಾನ್ಯ. ಆದರೆ ನಿಮ್ಮ ತೋಳಿನಲ್ಲಿ ನೋವಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ತೋಳಿನ ನೋವು ಸಹ ಹೃದಯದ ಕಾಯಿಲೆಯ ಸಂಕೇತ.

ತಲೆತಿರುಗುವಿಕೆ ಕೂಡ ಅನಾರೋಗ್ಯಕರ ಹೃದಯದ ಸಂಕೇತವಾಗಿದೆ. ನಿರ್ಜಲೀಕರಣದಿಂದಾಗಿ ತಲೆತಿರುಗುವಿಕೆ ಸಂಭವಿಸುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ನಿಮಗೆ ಹೃದ್ರೋಗವಿದ್ದರೆ ತಲೆತಿರುಗಬಹುದು. ಉಸಿರಾಟದ ತೊಂದರೆ ಸಹ ಕಾಣಿಸಿಕೊಳ್ಳಬಹುದು.

ಹೃದಯದಲ್ಲಿ ಸಮಸ್ಯೆ ಇದ್ದರೆ ಗಂಟಲು ನೋವು ಕೂಡ ಬರಬಹುದು. ಆದ್ದರಿಂದ ಇದನ್ನು ನಿರ್ಲಕ್ಷಿಸಬೇಡಿ. ಈ ಎಲ್ಲಾ ಚಿಕ್ಕಪುಟ್ಟ ತೊಂದರೆಗಳು ಮುಂದೊಂದು ದಿನ ಹೃದಯಾಘಾತಕ್ಕೆ ಕಾರಣವಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...