ಒಮಿಕ್ರಾನ್, ಷೇರು ಮಾರುಕಟ್ಟೆಯ ಏರಿಳಿತಗಳ ಮೇಲೆ ಪರಿಣಾಮ ಬೀರುತ್ತಿದೆ. ಒಮಿಕ್ರಾನ್ ರೂಪಾಂತರ ಡೆಲ್ಟಾದಷ್ಟು ಅಪಾಯಕಾರಿಯಲ್ಲ ಎಂಬ ಸಂಗತಿ ತಿಳಿಯುತ್ತಿದ್ದಂತೆ ಹಿಂದಿನ ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡು ಬಂದಿತ್ತು. ಹೂಡಿಕೆದಾರರು 15 ನಿಮಿಷಗಳಲ್ಲಿ 3 ಲಕ್ಷ ಕೋಟಿ ರೂಪಾಯಿ ಲಾಭ ಗಳಿಸಿದ್ದರು. ಈ ಮಂಗಳವಾರ ಸಹ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿದೆ.
ಷೇರುಪೇಟೆಯಲ್ಲಿ ಮಂಗಳವಾರದ ಗೂಳಿ ಓಟ ಕಂಡು ಬಂದಿದೆ. ಹೂಡಿಕೆದಾರರ ಸಂಪತ್ತು 3,45,719.55 ಕೋಟಿ ರೂಪಾಯಿ ಹೆಚ್ಚಾಗಿದೆ. ಬಿಎಸ್‌ಇ ಸೆನ್ಸೆಕ್ಸ್ 886.51 ಪಾಯಿಂಟ್‌ಗಳು ಅಥವಾ ಶೇಕಡಾ 1.56 ರಷ್ಟು ಏರಿಕೆಯಾಗಿ 57,633.65 ಕ್ಕೆ ದಿನದ ವಹಿವಾಟು ಮುಗಿಸಿದೆ.
ಒಮಿಕ್ರಾನ್ ಭಯದಿಂದ ಸೋಮವಾರ, ಸೆನ್ಸೆಕ್ಸ್ 949.32 ಪಾಯಿಂಟ್ ಕುಸಿತದೊಂದಿಗೆ 56,747.14 ನಲ್ಲಿ ವಹಿವಾಟು ಮುಗಿಸಿತ್ತು. ಇಂದು ಆರಂಭದಲ್ಲಿ ಇಳಿಕೆ ಕಂಡಿದ್ದರೂ ನಂತ್ರ ಸೆನ್ಸೆಕ್ಸ್ ನ ಏರಿಕೆ ಮುಖ ಮಾಡಿತು, ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು 3,45,719.55 ಕೋಟಿ ರೂಪಾಯಿಗಳಿಂದ 2,60,18,494.21 ಕೋಟಿ ರೂಪಾಯಿಗೆ ಜಿಗಿಯಿತು.
ಒಮಿಕ್ರಾನ್ ರೂಪಾಂತರವು ಆರ್ಥಿಕ ಬೆಳವಣಿಗೆ, ಹಣದುಬ್ಬರ ಮತ್ತು ಮಾರುಕಟ್ಟೆ ಅನಿಶ್ಚಿತತೆಯನ್ನು ಹೆಚ್ಚಿಸಲಿದೆ ಎಂದು ಕೆಲ ತಜ್ಞರು ಹೇಳಿದ್ದಾರೆ. ಮಾರುಕಟ್ಟೆ ಏರುಪೇರಿಗೆ ಅನೇಕ ಅಂಶಗಳು ಕಾರಣವಾಗುತ್ತವೆ.
ಭರವಸೆ ಮತ್ತು ಕಾಳಜಿ: ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್ ಕೊರೊನ ವೈರಸ್ ರೂಪಾಂತರವು ಸೋಂಕಿನ ಉಲ್ಬಣಗಳ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ಎಚ್ಚರಿಕೆ ನೀಡಿದೆ.
ಅನೇಕ ದೇಶಗಳ ಗಡಿ ಮುಚ್ಚಿದೆ. ಇದು ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗ ತಜ್ಞರು, ಅಸ್ತಿತ್ವದಲ್ಲಿರುವ ಲಸಿಕೆಗಳು ತೀವ್ರವಾದ ರೋಗವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಬಹುದು ಎಂದಿವೆ.
ಹಣದುಬ್ಬರ : ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್, ಪೂರೈಕೆ ಮತ್ತು ಬೇಡಿಕೆಯ ಸಮತೋಲನ ಉತ್ತಮವಾಗಿರುವುದರಿಂದ ಮುಂದಿನ ವರ್ಷ ಹಣದುಬ್ಬರದಲ್ಲಿ ಉತ್ತಮ ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಆದರೆ ಕೊರೊನಾ ಹೊಸ ರೂಪಾಂತರ ಬೆಲೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.
ಇದಲ್ಲದೆ ವಿಶಾಲವಾದ ಮಾರುಕಟ್ಟೆ, ಜಾಗತಿಕ ಮಾರುಕಟ್ಟೆಗಳು ಕೂಡ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತವೆ.