ಪತಂಜಲಿ ಆಯುರ್ವೇದ ಪ್ರಮೋಟ್ ಮಾಡ್ತಿರೋ ರುಚಿ ಸೋಯಾ ಇಂಡಸ್ಟ್ರೀಸ್ ಷೇರುಗಳು ಭಾರೀ ಏರಿಕೆ ದಾಖಲಿಸಿವೆ. ರುಚಿ ಸೋಯಾ ತನ್ನ ಷೇರುಗಳ ಫಾಲೋ ಆನ್ ಪಬ್ಲಿಕ್ ಆಫರ್ ಬೆಲೆಯನ್ನು 650 ರೂಪಾಯಿ ನಿಗದಿಪಡಿಸಿತ್ತು. ಬಿ.ಎಸ್.ಸಿ.ಯಲ್ಲಿ ಶೇ.31ರಷ್ಟು ಪ್ರೀಮಿಯಂನೊಂದಿಗೆ 850 ರೂಪಾಯಿಗೆ ತಲುಪಿದೆ.
ನಿನ್ನೆಯ ವಹಿವಾಟು ಅಂತ್ಯಕ್ಕಿಂತ ಶೇ.4 ರಷ್ಟು ಏರಿಕೆಯೊಂದಿಗೆ ಷೇರುಗಳು ಟ್ರೇಡ್ ಆಗುತ್ತಿವೆ. ನಿನ್ನೆ ದಿನದಂತ್ಯಕ್ಕೆ ಷೇರುಗಳ ಮೌಲ್ಯ 818 ರೂಪಾಯಿ ಇತ್ತು. ರುಚಿ ಸೋಯಾ ಕಂಪನಿ 4,300 ಕೋಟಿ ಮೌಲ್ಯದ 6.61 ಕೋಟಿ ಷೇರುಗಳನ್ನು ಪಟ್ಟಿ ಮಾಡಿತ್ತು.
ಮಾರ್ಚ್ 28 ರಂದು ಬಾಬಾ ರಾಮ್‌ದೇವ್ ನೇತೃತ್ವದ ಪತಂಜಲಿ ಸಮೂಹದ ರುಚಿ ಸೋಯಾ ಎಫ್ ಪಿ ಓ ಗಾಗಿ ಬಿಡ್ ಮಾಡಿದ್ದವರಿಗೆ, ಅದನ್ನು ಹಿಂತೆಗೆದುಕೊಳ್ಳುವಂತೆ ಸೆಬಿ ಸೂಚಿಸಿತ್ತು. ಬಿಡ್ ಹಾಗೂ ಷೇರು ಮಾರಾಟಕ್ಕೆ ಸಂಬಂಧಿಸಿದಂತೆ “ಅಪೇಕ್ಷಿಸದ SMS ವಿತರಣೆ” ಕುರಿತು ಅವರಿಗೆ ಎಚ್ಚರಿಕೆ ನೀಡಿತ್ತು. ಸೆಬಿ ನಿರ್ದೇಶನದ ಪ್ರಕಾರ ಮಾರ್ಚ್ 28ಕ್ಕೆ FPO ಕ್ಲೋಸ್ ಆಗಿದೆ. ಆದ್ರೆ ಮಾರ್ಚ್ 30ರವರೆಗೆ ಅಂದ್ರೆ ಎರಡು ದಿನಗಳ ಕಾಲ ವಿತ್ ಡ್ರಾ ಮಾಡಿಕೊಳ್ಳಲು ಅವಕಾಶವಿತ್ತು.
FPO ಅಡಿಯಲ್ಲಿ 4,300 ಕೋಟಿ ಮೌಲ್ಯದ 6,61,53,846 ಷೇರುಗಳನ್ನು ಅಲಾಟ್ ಮಾಡಿರೋದಾಗಿ ರುಚಿ ಸೋಯಾ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿತ್ತು. ಮಾರ್ಚ್ 31ಕ್ಕೆ ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ನೀಡುವಂತೆ ರುಚಿ ಸೋಯಾಗೆ ಸೆಬಿ ನಿರ್ದೇಶನ ನೀಡಿತ್ತು. ಅದಾದ ಬಳಿಕ 97 ಲಕ್ಷ ಬಿಡ್ ಗಳನ್ನು ಹಿಂಪಡೆಯಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಯೋಗ ಗುರು ಬಾಬಾ ರಾಮದೇವ್, ಸದ್ಯದಲ್ಲೇ ಪತಂಜಲಿ ಭಾರತದ ನಂಬರ್ ವನ್ ಫುಡ್ ಕಂಪನಿ ಎನಿಸಿಕೊಳ್ಳಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.