ಧಾನ್ಯ, ಕಾಳುಗಳಿಂದ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ನಮಗೆಲ್ಲಾ ಗೊತ್ತು. ಅದರಲ್ಲೂ ಹೊಟೇಲ್ ಗಳಲ್ಲಿ ಚಟ್ನಿ ತಯಾರಿಸುವಾಗ ಮುಖ್ಯವಾಗಿ ಬಳಸುವ ಹುರಿಗಡಲೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದು ನಿಮಗೆ ಗೊತ್ತೇ?
ಹುರಿಗಡಲೆ ಮಾರುಕಟ್ಟೆಯಲ್ಲಿ ಎರಡು ವಿಧದಲ್ಲಿ ದೊರೆಯುತ್ತದೆ. ಸಿಪ್ಪೆ ಸಹಿತ ಹಾಗೂ ರಹಿತವಾಗಿ. ಇದರಲ್ಲಿ ಹೇರಳವಾದ ಪೋಷಕಾಂಶಗಳಿದ್ದು ಪ್ರೊಟೀನ್, ಕಬ್ಬಿಣಾಂಶಗಳು ಸಮೃದ್ಧವಾಗಿವೆ.
ದಿನಕ್ಕೆ ವ್ಯಕ್ತಿ ಒಂದು ಮುಷ್ಠಿಯಷ್ಟು ಹುರಿಗಡಲೆ ಮಾತ್ರ ಸೇವಿಸಬಹುದು. ಅದಕ್ಕಿಂತ ಹೆಚ್ಚು ಸೇವಿಸುವುದು ಒಳ್ಳೆಯದಲ್ಲ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಇವು ಹಾನಿಕಾರಕ ಸೋಂಕುಗಳಿಂದ ನಿಮ್ಮ ದೇಹವನ್ನು ಕಾಪಾಡಿಕೊಳ್ಳುತ್ತದೆ. ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.
ರಕ್ತವನ್ನು ಶುದ್ಧೀಕರಿಸುವ ಇದನ್ನು ನಿತ್ಯ ಸೇವಿಸುವುದರಿಂದ ಮುಖ ಹೊಳಪು ಪಡೆದುಕೊಳ್ಳುತ್ತದೆ. ಮಧುಮೇಹವನ್ನು ನಿಯಂತ್ರಿಸುವ ಇದು ರಕ್ತದಲ್ಲಿರುವ ಹೆಚ್ಚಿನ ಸಕ್ಕರೆಯನ್ನು ಹೀರಿಕೊಳ್ಳುತ್ತದೆ. ಉಸಿರಾಟ ಸಮಸ್ಯೆ ಇರುವವರು ರಾತ್ರಿ ಹುರಿಗಡಲೆ ತಿಂದು ಬಿಸಿ ಹಾಲು ಕುಡಿದರೆ ಆರಾಮ ಎನಿಸುತ್ತದೆ.