![](https://kannadadunia.com/wp-content/uploads/2022/10/viral-sarpanch-election-poster.jpg)
ಹರಿಯಾಣದ ಸಿರ್ಸಾದ್ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಜೈ ಕರಣ್ ಲಾತಾವಾಲ ಎಂಬಾತ ಚುನಾವಣೆಯಲ್ಲಿ ತಾನು ಗೆದ್ದರೆ ಗ್ರಾಮದಲ್ಲಿ ಮೂರು ಏರ್ಪೋರ್ಟ್ ನಿರ್ಮಿಸುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲ, ಉಚಿತ ಬೈಕ್ ಹಾಗೂ ಮೇಕಪ್ ಕಿಟ್ ನೀಡುವುದಲ್ಲದೆ ಪೆಟ್ರೋಲ್ ಡೀಸೆಲ್ ಅನ್ನು 20 ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ.
ಜೊತೆಗೆ ಗ್ರಾಮದಲ್ಲಿ ಮೆಟ್ರೋ ರೈಲು ಸಂಚಾರ, ಹೆಲಿಕಾಪ್ಟರ್ ಸೇವೆ ಲಭ್ಯವಿರುವಂತೆ ಮಾಡುವುದಾಗಿ ಹೇಳಿದ್ದು, ಜಿಎಸ್‌ಟಿ ಅನ್ನು ಸಂಪೂರ್ಣವಾಗಿ ತೆಗೆಯುವುದಾಗಿ ಭರವಸೆ ನೀಡಿದ್ದಾನೆ. ಈತನ ಚುನಾವಣಾ ಪ್ರಣಾಳಿಕೆಯ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.