ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ವಿಡಿಯೋ ದಿಂದಾಗಿ ಮುಸ್ಲಿಂ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಇದೇ ವೇಳೆ ಪೊಲೀಸರನ್ನು ಬಿಡಬೇಡಿ ಅವರನ್ನು ಕೊಲ್ಲಿ ಎಂಬ ಮಾತಿನಿಂದ ಪ್ರಚೋದನೆಗೊಂಡ ಯುವಕರು ಇಬ್ಬರು ಪೊಲೀಸರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸ್ ಕಾನ್ಸ್ಟೇಬಲ್ ಮಂಜುನಾಥ್ ತಿಳಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಪಾರಾದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಗಳು ಮುಸ್ಲಿಂ ಯುವಕರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ಪೇದೆಗಳನ್ನು ಸುತ್ತುವರೆದಿದ್ದ ಹತ್ತು ಹದಿನೈದು ಜನ ಕಿಡಿಗೇಡಿಗಳು ಸೈಜುಗಲ್ಲು ಎತ್ತಿಹಾಕಿ ಇಬ್ಬರು ಪೇದೆಗಳ ಹತ್ಯೆಗೆ ಸಂಚು ರೂಪಿಸಿದ್ದರು.
ಉದ್ರಿಕ್ತಗೊಂಡ ಘಟನಾ ಸ್ಥಳಕ್ಕೆ ಪೊಲೀಸರು ಬಂದ ತಕ್ಷಣ ಅವರನ್ನು ಸುತ್ತುವರೆದಿದ್ದ ಯುವಕರು ಅವರನ್ನು ಬಿಡಬೇಡಿ ಕಲ್ಲು ಎತ್ತಿಹಾಕಿ ಸಾಯಿಸಿ ಎಂದು ಪ್ರಚೋದನೆ ನೀಡುತ್ತಿದ್ದರು. ಘಟನಾ ಸ್ಥಳದಿಂದ ತಪ್ಪಿಸಿಕೊಂಡ ಕಾನ್ಸ್ಟೇಬಲ್ ಗಳ ಬೈಕನ್ನು ಉದ್ರಿಕ್ತ ಯುವಕರು ಜಖಂ ಮಾಡಿದ್ದಾರೆ. ಇದೀಗ ಪೊಲೀಸ್ ಕಾನ್ಸ್ಟೇಬಲ್ ಗಳು ಘಟನೆಯಿಂದ ತಮಗೆ 30ಸಾವಿರ ರೂಪಾಯಿಗಳ ನಷ್ಟವಾಗಿದೆ ಎಂದು ಯುವಕರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.