ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ವಿಡಿಯೋ ದಿಂದಾಗಿ ಮುಸ್ಲಿಂ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಮುಸ್ಲಿಂ ಯುವಕರ ಕಲ್ಲುತೂರಾಟ ನಡೆಸಲು ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಚೋದನಕಾರಿ ಭಾಷಣಕ್ಕೆ ಕಾರಣರಾದ ನಾಲ್ಕು ಜನರ ವಿರುದ್ಧ ಐಪಿಸಿ ಸೆಕ್ಷನ್141, 143,307ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ,ಮೊಹಮ್ಮದ್ ಆರಿಫ್, ಮೌಲ್ವಿ ವಾಸಿಂ, ವಸೀಂ ಪಠಾಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಸೀಂ ಪಠಾಣ್ ಹುಬ್ಬಳ್ಳಿಯ ಮಂಟೂರ ರಸ್ತೆಯ ಮಿಲ್ಲತ್ ಓಣಿಯಲ್ಲಿರುವ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಪರಾರಿಯಾಗಿದ್ದಾನೆ. ಅಕ್ಕಪಕ್ಕದ ಮನೆಗಳಿಗೂ ಮಾಹಿತಿ ನೀಡದೆ ಪರಾರಿಯಾಗಿದ್ದಾನೆ.