ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದ ವಿಡಿಯೋದಿಂದಾಗಿ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾದ ಆರೋಪಿ ಅಭಿಷೇಕ್ ಹಿರೇಮಠ್ ನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೂರು ತಿಂಗಳ ಹಿಂದೆ ಹುಬ್ಬಳ್ಳಿಯ ಆಂಜನೇಯ ದೇವಸ್ಥಾನದ ಬಳಿ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಹಣ್ಣನ್ನು ಯುವಕರ ಗುಂಪೊಂದು ನಾಶಪಡಿಸಿತ್ತು.
ಇದರಿಂದ ಆಕ್ರೋಶಗೊಂಡಿದ್ದ ಮುಸ್ಲಿಮ್ ಯುವಕರು ಅಭಿಷೇಕನ ಸ್ಟೇಟಸ್ ನಿಂದ ಪ್ರಚೋದನೆಗೆ ಒಳಗಾಗಿ ಅಭಿಷೇಕ್ ಮನೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು.
ಅಪಹರಣಕ್ಕೊಳಗಾದ ಮಹಿಳೆಯ ರಕ್ಷಿಸಿದ ಟಿಕ್‍ಟಾಕ್ ಸಂಕೇತ..!
ಮಾಹಿತಿಯನ್ನು ಅರಿತ ಸ್ಥಳೀಯರು ಮತ್ತು ಪೋಲೀಸಿನವರು ವಾತಾವರಣವನ್ನು ತಿಳಿಗೊಳಿಸಿ ಗಲಭೆ ನಡೆಸುವುದನ್ನು ತಪ್ಪಿಸಿದ್ದಾರೆ.
ನಂತರ ಮುಸ್ಲಿಂ ಮುಖಂಡರು ಹಾಗೂ ಯುವಕರು ಸೇರಿ ಅಭಿಷೇಕ್ ಮೇಲೆ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಇದೀಗ ಪೊಲೀಸರು ಅಭಿಷೇಕ್ ಪೋಷಕರನ್ನು ಅವರ ಮನೆಯಿಂದ ಸ್ಥಳಾಂತರಗೊಳಿಸಿ ಶಾಂತಿ ಕಾಪಾಡುವಂತೆ ಮನವಿ ಸಲ್ಲಿಸಿದ್ದಾರೆ. ಇದರಿಂದ ಉದ್ವಿಗ್ನಗೊಂಡ ಯುವಕರು ಪೊಲೀಸರ ಜೀಪಿನತ್ತ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ.
ನಗರದಾದ್ಯಂತ ಏಪ್ರಿಲ್ 20ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಲ್ಲು ತೂರಾಟ ನಡೆಸಿದ ಯುವಕರನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿದೆ.