ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ವಿಡಿಯೋ ದಿಂದಾಗಿ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವಿಡಿಯೋದಿಂದ ಆಕ್ರೋಶಗೊಂಡಿದ್ದ ಮುಸ್ಲಿಮ್ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಮುಸ್ಲಿಂ ಯುವಕರು ಕಲ್ಲುತೂರಾಟ ನಡೆಸಲು ಪೊಲೀಸ್ ಠಾಣೆ ಮುಂದೆ ಯುವಕರಿಗೆ ಪ್ರಚೋದನೆ ನೀಡಿದ ಮೌಲ್ವಿಯೆ ಕಾರಣ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಸಿಂಪಲ್ ಆಂಡ್ ಟೇಸ್ಟೀ ಸ್ಪೈಸಿ ʼಕ್ಯಾರೆಟ್ ಜ್ಯೂಸ್ʼ
ಗಲಭೆ ಪ್ರಕರಣದಲ್ಲಿ ಇದುವರೆಗೂ 104 ಮಂದಿಯನ್ನು ಬಂಧಿಸಲಾಗಿದ್ದು ಮತ್ತೆ 15 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಲ್ಲಿ 6ಮಂದಿ ರೌಡಿಶೀಟರ್ ಗಳು ಇದ್ದಾರೆ. ಈ ಹಿಂದೆ ನಡೆದ ಕೆಲವು ಗಲಾಟೆಯಲ್ಲಿ ಇವರು ಭಾಗಿಯಾಗಿದ್ದರು.
ಮೌಲ್ವಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹೈದರಾಬಾದಿಗೆ ತೆರಳಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಮೌಲ್ವಿಗೆ ಶರಣಾಗುವಂತೆ ಸೂಚಿಸಿದ್ದಾರೆ. ನಾಳೆಯೊಳಗೆ ಶರಣಾಗುವಂತೆ ಹುಬ್ಬಳ್ಳಿ ಪೊಲೀಸರು ಸೂಚನೆ ನೀಡಿದ್ದಾರೆ.