alex Certify ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ವರನಂತೆ ಶೃಂಗರಿಸಿ ಅಂತ್ಯಕ್ರಿಯೆ ನೆರವೇರಿಸಿದ ಪೋಷಕರು…! ಇದರ ಹಿಂದಿತ್ತು ಮನಕಲಕುವ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ವರನಂತೆ ಶೃಂಗರಿಸಿ ಅಂತ್ಯಕ್ರಿಯೆ ನೆರವೇರಿಸಿದ ಪೋಷಕರು…! ಇದರ ಹಿಂದಿತ್ತು ಮನಕಲಕುವ ಕಾರಣ

ಅರುಣಾಚಲ ಪ್ರದೇಶದ ಕಮಂಗ್​ ಸೆಕ್ಟರ್​ನಲ್ಲಿ ಭಾರತೀಯ ಸೇನೆಯ ಗಸ್ತು ವಾಹನವು ಹಿಮಪಾತಕ್ಕೆ ಸಿಲುಕಿದ ಪರಿಣಾಮ ಫೆಬ್ರವರಿ 6ರಂದು ಆರು ಮಂದಿ ಭಾರತೀಯ ಯೋಧರು ಜೀವ ಕಳೆದುಕೊಂಡಿದ್ದರು. ಇವರಲ್ಲಿ ಒಬ್ಬರಾದ ಭಾರತೀಯ ಸೇನೆಯ ಯೋಧ ಅಂಕೇಶ್​ ಭಾರದ್ವಾಜ್​ರ ಅಂತ್ಯಕ್ರಿಯೆಯನ್ನು ಹಿಮಾಚಲ ಪ್ರದೇಶದಲ್ಲಿ ಭಾನುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಸೆರವೇರಿಸಲಾಗಿದೆ. 22 ವರ್ಷದ ಅಂಕೇಶ್​ ಅಂತ್ಯಕ್ರಿಯೆಯು ಹಿಮಾಚಲ ಪ್ರದೇಶದ ಬಿಲಾಸ್​ಪುರ ಜಿಲ್ಲೆಯ ಸೆಯು ಗ್ರಾಮದಲ್ಲಿ ನೆರವೇರಿದೆ.

ಹುತಾತ್ಮ ಯೋಧ ಅಂಕೇಶ್​ ಪಾರ್ಥೀವ ಶರೀರವನ್ನು ಭಾನುವಾರ ಬೆಳಗ್ಗೆ ಸ್ವಗ್ರಾಮ ಸೆಯುಗೆ ತರಲಾಯಿತು. ವರದಿಗಳ ಪ್ರಕಾರ ಪುತ್ರನ ಮೃತದೇಹವನ್ನು ಮುಂಜಾನೆ ಹೊತ್ತಿನಲ್ಲಿಯೇ ಸ್ವಗ್ರಾಮಕ್ಕೆ ತರಬೇಕು ಎಂದು ಅಂಕೇಶ್​ ತಂದೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದರು ಎನ್ನಲಾಗಿದೆ.

ಯೋಧನ ಪಾರ್ಥಿವ ಶರೀರವು ಗ್ರಾಮಕ್ಕೆ ತಲುಪುತ್ತಿದ್ದಂತೆಯೇ ಎಲ್ಲೆಲ್ಲೂ ಅಂಕೇಶ್​ ಭಾರದ್ವಾಜ್​ ʼಅಮರ್​ ರಹೇʼ ಎಂಬ ಘೋಷಣೆಯು ಕೇಳಿ ಬಂದವು.

ಅಂಕೇಶ್​ ತಂದೆ ಬಂಚಾ ರಾಮ್​ ಹಾಗೂ ತಾಯಿ ಕಶ್ಮೀರಾ ದೇವಿ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮ ಪುತ್ರನ ಮದುವೆಯನ್ನು ಕಣ್ತುಂಬಿಕೊಳ್ಳಬೇಕೆಂಬ ಕನಸಿತ್ತು. ಆದರೆ ಆತನ ಅಕಾಲಿಕ ಮರಣವು ನಮ್ಮ ಆಸೆಯನ್ನು ಕನಸಾಗಿಯೇ ಉಳಿಸಿದೆ ಎಂದು ಅಳಲು ಕಣ್ಣೀರಿಟ್ಟರು.

ಆದರೆ ಸಾಂಕೇತಿಕವಾಗಿ ತಮ್ಮ ಆಸೆಯನ್ನು ಈಡೇರಿಸಿಕೊಳ್ಳಬೇಕೆಂಬ ಸಲುವಾಗಿ ಪೋಷಕರು ಅಂಕೇಶ್​​ ಪಾರ್ಥೀವ ಶರೀರವನ್ನು ವರನಂತೆ ಶೃಂಗರಿಸಿದರು. ಹಾಗೂ ಅವರ ಅಂತಿಮ ಯಾತ್ರೆಗೆ ಬ್ಯಾಂಡ್​ ಪಾರ್ಟಿಯನ್ನೂ ಆಯೋಜಿಸಿದ್ದರು. ಅಂಕೇಶ್​ ಮನೆಯನ್ನು ಮದುವೆ ಮನೆಯಂತೆ ಶೃಂಗರಿಸಲಾಗಿತ್ತು. ಮನೆಯಲ್ಲಿ ತ್ರಿವರ್ಣ ಧ್ವಜವನ್ನೂ ಅಳವಡಿಸಲಾಗಿತ್ತು.

ಹಿಮಾಚಲ ಪ್ರದೇಶದ ಆಹಾರ ಮತ್ತು ಸರಬರಾಜು ರಾಜಿಂದರ್ ಗರ್ಗ್ ಮತ್ತು ಇತರ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಹಾಜರಿದ್ದರು. ಅಂಕೇಶ್​ ಎರಡು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. ಫೆಬ್ರವರಿ ಆರರಂದು ಯೋಧರು ಕಣ್ಮರೆಯಾಗಿದ್ದರು. ಎರಡು ದಿನಗಳ ಬಳಿಕ ಅಂದರೆ ಫೆಬ್ರವರಿ 8ರಂದು ಯೋಧರ ಮೃತದೇಹಗಳು ಪತ್ತೆಯಾಗಿದ್ದವು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...