alex Certify ಹುಡುಗಿಯೊಂದಿಗೆ ‘ಹೋಂ ಸ್ಟೇ’ ನಲ್ಲಿದ್ದಾಗಲೇ ಹಣಕ್ಕಾಗಿ ಬ್ಲಾಕ್ ಮೇಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯೊಂದಿಗೆ ‘ಹೋಂ ಸ್ಟೇ’ ನಲ್ಲಿದ್ದಾಗಲೇ ಹಣಕ್ಕಾಗಿ ಬ್ಲಾಕ್ ಮೇಲ್….!

ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತಳಾಗಿದ್ದ ಯುವತಿ ಜೊತೆಗೆ ಹೋಂ ಸ್ಟೇನಲ್ಲಿದ್ದಾಗಲೇ ನುಗ್ಗಿದ ನಾಲ್ವರು ಆರೋಪಿಗಳು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಮೂಲದ ವ್ಯಕ್ತಿ ಯುವತಿ ಜೊತೆ ಹೋಂ ಸ್ಟೇ ನಲ್ಲಿದ್ದಾಗ ಹುಬ್ಬಳ್ಳಿಯ ಶಿವರಾಜ್ ಚಂದ್ರಪಟ್ಟಣ, ಹಾಸನದ ರಮ್ಯಾ, ತುಮಕೂರಿನ ಪವಿತ್ರ ಹಾಗೂ ಚಿಕ್ಕಮಗಳೂರಿನ ಸುರೇಶ್ ಕುಮಾರ್ ಅಲ್ಲಿಗೆ ನುಗ್ಗಿ ನಿಮ್ಮ ಖಾಸಗಿ ಫೋಟೋ ಸೆರೆ ಹಿಡಿದಿದ್ದೇವೆ. ಹೀಗಾಗಿ 15 ಲಕ್ಷ ರೂ. ನೀಡಿ ಎಂಬ ಬೇಡಿಕೆ ಇಟ್ಟಿದ್ದರು.

ಹಣ ನೀಡದಿದ್ದರೆ ನಿಮ್ಮ ಮನೆಯವರಿಗೆ ತಿಳಿಸುತ್ತೇವೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳನ್ನು ಹಾಕುತ್ತೇವೆ ಎಂದು ಬೆದರಿಕೆ ಹಾಕಿ 1.20 ಲಕ್ಷ ರೂ. ಗಳನ್ನು ಪೀಕಿಸಿದ್ದರು. ಉಳಿದ ಹಣಕ್ಕೆ ಬೇಡಿಕೆ ಇಟ್ಟ ಸಂದರ್ಭದಲ್ಲಿ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ದಾವಣಗೆರೆಯ ವಿದ್ಯಾನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...