ಹುಡುಗರ ಮಾತುಗಳು ಅನೇಕ ಬಾರಿ ಹುಡುಗಿಯರನ್ನು ಹರ್ಟ್ ಮಾಡುತ್ತವೆ. ಹುಡುಗರು ಕೆಲವೊಮ್ಮೆ ಆಡುವ ಮಾತುಗಳು ಸಂಬಂಧವನ್ನೇ ಹಾಳು ಮಾಡುವ ಸಾಧ್ಯತೆ ಇರುತ್ತದೆ. ಸಂಬಂಧ ಗಟ್ಟಿಯಾಗಿರಬೇಕೆಂದಾದ್ರೆ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬುದನ್ನು ಮೊದಲು ತಿಳಿದಿರಬೇಕು.
ನಿಮ್ಮ ಗರ್ಲ್ ಫ್ರೆಂಡ್ ಗೆ ಯಾವ ಮಾತು ನೋವುಂಟು ಮಾಡುತ್ತದೆ ಎಂಬುದನ್ನು ನೆನಪಿಡುವುದು ಬಹಳ ಮುಖ್ಯ.
ನಿಮ್ಮ ಗರ್ಲ್ ಫ್ರೆಂಡ್ ಮುಂದೆ ಎಂದೂ ಬೇರೆ ಸ್ತ್ರೀ ಬಗ್ಗೆ ಮಾತನಾಡಬೇಡಿ. ಅಪ್ಪಿತಪ್ಪಿಯೂ ಬೇರೆ ಹುಡುಗಿಯರನ್ನು ಹೊಗಳಬೇಡಿ.
ಸಂಬಂಧದ ಬಗ್ಗೆ ಹುಡುಗಿಯರು ಹೆಚ್ಚಾಗಿ ಯೋಚನೆ ಮಾಡ್ತಾರೆ. ಹಾಗೆ ಆತಂಕ ಕೂಡ ಅವರನ್ನು ಆವರಿಸಿರುತ್ತದೆ. ಈ ವೇಳೆ ನೀನು ತುಂಬಾ ಯೋಚನೆ ಮಾಡ್ತೀಯಾ. ನೀವು ಯೋಚನೆ ಮಾಡ್ತಿರುವುದು ತಪ್ಪು ಎಂದು ಎಂದೂ ಹೇಳಬೇಡಿ.
ಗರ್ಲ್ ಫ್ರೆಂಡ್ ಜೊತೆ ಸಮಯ ಕಳೆಯುತ್ತಿರುವ ವೇಳೆ ಬೇರೆ ಸ್ನೇಹಿತರ ಬಗ್ಗೆ ಮಾತು ಬೇಡ. ಅನವಶ್ಯಕವಾಗಿ ಅವರನ್ನು ಹೊಗಳಬೇಡಿ.
ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿದ್ದರೆ ಎಂದೂ ಆಕೆಯ ಪಾಸ್ವರ್ಡ್ ಕೇಳಬೇಡಿ. ಇದು ನಿಮ್ಮ ಮೇಲಿರುವ ನಂಬಿಕೆ, ವಿಶ್ವಾಸವನ್ನು ಹಾಳು ಮಾಡುತ್ತದೆ.
ಹುಡುಗಿಯರ ಫೋನ್ ಚೆಕ್ ಮಾಡುವುದು ಹಾಗೆ ಅವರನ್ನು ಸಂಶಯದಿಂದ ನೋಡುವುದು ಹುಡುಗಿಯರಿಗೆ ಇಷ್ಟವಾಗುವುದಿಲ್ಲ.