alex Certify ಹುಡುಗಿಯರು ಹೊಟ್ಟೆ ಅಡಿ ಮಾಡಿ ಮಲಗುವುದ್ಯಾಕೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯರು ಹೊಟ್ಟೆ ಅಡಿ ಮಾಡಿ ಮಲಗುವುದ್ಯಾಕೆ ಗೊತ್ತಾ…..?

ಎಲ್ಲರೂ ಮಲಗುವ ಸ್ಟೈಲ್ ಬೇರೆ ಬೇರೆ. ಅವರ ಸ್ಟೈಲ್ ನಲ್ಲಿ ಮಲಗಿದ್ರೆ ಮಾತ್ರ ನಿದ್ದೆ ಬರುತ್ತೆ. ಕೆಲವರು ನೇರವಾಗಿ ಮಲಗಿದ್ರೆ ಮತ್ತೆ ಕೆಲವರು ಬಲಕ್ಕೆ ಅಥವಾ ಎಡಕ್ಕೆ ತಿರುಗಿ ಮಲಗ್ತಾರೆ. ಇನ್ನೂ ಅನೇಕರು ಹೊಟ್ಟೆ ಅಡಿಗಾಗಿ ಮಲಗ್ತಾರೆ. ಹೀಗೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಮಾತಿದೆ.

ಆದ್ರೆ ಅನೇಕ ಹುಡುಗಿಯರು ಹೀಗೆ ಮಲಗುವುದನ್ನು ಇಷ್ಟಪಡ್ತಾರೆ. ಇದಕ್ಕೆ ಕಾರಣ ಏನು ಎನ್ನುವುದನ್ನು ಅಧ್ಯಯನವೊಂದು ಹೇಳಿದೆ. ಅನೇಕ ಹುಡುಗಿಯರ ಜೊತೆ ಮಾತುಕತೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿದೆ. ಅಧ್ಯಯನದಲ್ಲಿ ಚಿತ್ರ – ವಿಚಿತ್ರ ಕಾರಣಗಳು ಹೊರಬಂದಿವೆ. ವೈದ್ಯರ ಪ್ರಕಾರ ಹೊಟ್ಟೆ ಅಡಿ ಮಾಡಿ ಮಲಗುವುದರಿಂದ ಮುಖ ಸುಂದರವಾಗಿರುತ್ತದಂತೆ. ಹೀಗೆ ಮಲಗುವುದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲವಂತೆ.

ಹೊಟ್ಟೆ ಅಡಿ ಮಾಡಿ ಮಲಗುವ ಹುಡುಗಿಯರ ಪ್ರಕಾರ ಹೀಗೆ ಮಲಗುವುದರಿಂದ ಹೊಟ್ಟೆ ದೊಡ್ಡದಾಗುವುದಿಲ್ಲವಂತೆ. ಹಿಂದೆ ಕೂಡ ಜನರು ಇದೇ ನಂಬಿಕೆಯಲ್ಲಿದ್ದರು. ಆದ್ರೆ ವಿಜ್ಞಾನಿಗಳು ಇದನ್ನು ಅಲ್ಲಗಳೆದಿದ್ದಾರೆ. ಮುಟ್ಟಿನ ದಿನಗಳಲ್ಲಿ ನೋವಿನಿಂದ ಸ್ವಲ್ಪ ನೆಮ್ಮದಿ ಸಿಕ್ಕಂತಾಗುತ್ತದೆ ಎಂದು ಕೆಲ ಹುಡುಗಿಯರು ಹೇಳಿದ್ದಾರೆ. ಹೀಗೆ ಮಲಗುವುದರಿಂದ ಲೈಂಗಿಕ ಉತ್ತೇಜನ ಕೂಡ ಕಡಿಮೆಯಾಗುತ್ತದೆಯಂತೆ.

ಆದ್ರೆ ಹೀಗೆ ಮಲಗುವುದರಿಂದ ಫಿಟ್ಸ್ ಬರುವ ಸಾಧ್ಯತೆ ಜಾಸ್ತಿ ಇದೆ ಎಂದು ಇನ್ನೊಂದು ಅಧ್ಯಯನ ಹೇಳಿದೆ. ಹಠಾತ್ ಸಾವು ಸಂಭವಿಸುವ ಸಾಧ್ಯತೆ ಕೂಡ ಇದೆಯಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...