ನನ್ನ ಹುಡುಗಿಗೆ ಯಾವಾಗ ಕೋಪ ಬರುತ್ತೆ ಅನ್ನೋದೆ ಗೊತ್ತಾಗಲ್ಲ. ಯಾವಾಗ್ಲೂ ಮುನಿಸಿಕೊಂಡಿರ್ತಾಳೆ. ಇದು ಬಹುತೇಕ ಹುಡುಗರ ಕಂಪ್ಲೇಂಟ್. ಪತಿಯಂದಿರು ಕೂಡ ಇದೇ ಕಂಪ್ಲೇಂಟ್ ಮಾಡ್ತಾರೆ. ಹುಡುಗಿ/ಪತ್ನಿ ಮುನಿಸಿಕೊಳ್ಳಲು ಹುಡುಗ/ಪತಿಯ ವರ್ತನೆ ಕೂಡ ಕಾರಣವಾಗಿರಬಹುದು. ಹಾಗಾಗಿ ಯಾವ ಕೆಲಸ ಮಾಡಿದ್ರೆ ಹುಡುಗಿ ಮುನಿಸಿಕೊಳ್ತಾಳೆ ಎಂಬುದನ್ನು ಹುಡುಗ್ರು ತಿಳಿದಿರಬೇಕಾಗುತ್ತದೆ.
ಅತಿಯಾದ ಪ್ರೀತಿ : ಸಂಗಾತಿ ನನ್ನನ್ನು ಪ್ರೀತಿ ಮಾಡಬೇಕೆಂದು ಎಲ್ಲರೂ ಬಯಸ್ತಾರೆ. ಹಾಗಂತ ಉಸಿರುಗಟ್ಟಿಸುವ ಪ್ರೀತಿ ಯಾರಿಗೂ ಇಷ್ಟವಾಗುವುದಿಲ್ಲ. ಪತಿ ಸದಾ ಅಂಟಿಕೊಂಡಿದ್ದರೆ ಪತ್ನಿಗೆ ಕಿರಿಕಿರಿಯಾಗಬಹುದು. ಇದು ಆಕೆ ಕೋಪಕ್ಕೂ ಕಾರಣವಾಗಬಹುದು. ನೆನಪಿಡಿ ನಿಮ್ಮ ಮಿತಿಮೀರಿದ ಪ್ರೀತಿ, ಲೈಂಗಿಕ ಜೀವನದ ಮೇಲೂ ಪ್ರಭಾವ ಬೀರುತ್ತದೆ. ಸುಂದರ ಸಂಬಂಧದ ಆನಂದ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.
ಕೋಪ-ಅಹಂ : ರೋಮ್ಯಾಂಟಿಕ್, ಸೆಕ್ಸ್ ಹಾಗೂ ನಿಮ್ಮ ವರ್ತನೆಗೆ ನೇರ ಸಂಬಂಧವಿದೆ. ನೀವು ನಿಮ್ಮ ಸಂಗಾತಿ ಜೊತೆ ಹೇಗಿರ್ತೀರಾ ಎಂಬುದು ನಿಮ್ಮ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕೆಲ ಹುಡುಗ್ರು ನನಗಿಂತ ಯಾರಿಲ್ಲ. ನನಗೆ ಎಲ್ಲವೂ ಗೊತ್ತು ಎಂಬ ಭಾವನೆಯಲ್ಲಿರುತ್ತಾರೆ. ಸಂಗಾತಿಯನ್ನು ಅವರು ಪ್ರೀತಿಸ್ತಾರೆ ನಿಜ. ಆದ್ರೆ ಸಂಗಾತಿ ಭಾವನೆಗೆ ಗೌರವ ನೀಡುವುದಿಲ್ಲ. ಅಂತವರಿಂದ ಮಹಿಳೆ ದೂರ ಹೋಗಲು ಬಯಸ್ತಾಳೆ.
ನಿರ್ಲಕ್ಷ್ಯ : ಮಹಿಳೆಯರು ಸಣ್ಣ ಸಣ್ಣ ಸಂಗತಿಗೂ ಮಹತ್ವ ನೀಡ್ತಾರೆ. ಆದರೆ ಪುರುಷರು ಅದನ್ನು ನಿರ್ಲಕ್ಷ್ಯಿಸ್ತಾರೆ. ಸಣ್ಣ ವಿಚಾರಕ್ಕೆ ಕಣ್ಣೀರಿಡುವ ಸಂಗಾತಿಗೆ ಸಂತೈಸದೆ ಆಕೆ ಕಣ್ಣೀರನ್ನು ನಿರ್ಲಕ್ಷ್ಯ ಮಾಡುವ ಪುರುಷ ಪ್ರೀತಿ ಕಳೆದುಕೊಳ್ಳುವುದು ನಿಶ್ಚಿತ.
ಬೇರೆ ಮಹಿಳೆಯರಿಗೆ ಮಹತ್ವ : ಕೆಲ ಪುರುಷರು ತಮ್ಮ ಸಂಗಾತಿ, ಪತ್ನಿ ಬಿಟ್ಟು ಬೇರೆ ಮಹಿಳೆಯರ ಬಗ್ಗೆ ಕಾಳಜಿ ವಹಿಸ್ತಾರೆ. ಇದು ಮಹಿಳೆಯಾದವಳಿಗೆ ಇಷ್ಟವಾಗುವುದಿಲ್ಲ. ಮಹಿಳೆ ತನ್ನ ಸಂಗಾತಿಯನ್ನು ಇನ್ನೊಬ್ಬರ ಜೊತೆ ನೋಡಲು ಇಷ್ಟಪಡುವುದಿಲ್ಲ.