ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಕೃತಿ ಶೆಟ್ಟಿ ಇಂದು ತಮ್ಮ 19ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಕೃತಿ ಶೆಟ್ಟಿ ತಮ್ಮ 16ನೇ ವಯಸ್ಸಿನಲ್ಲಿ 2019ರಲ್ಲಿ ತೆರೆಕಂಡ ಬಾಲಿವುಡ್ ನ ‘ಸೂಪರ್ 30’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು.
ಅದೇ ವರ್ಷದಂದು ತೆಲುಗಿನ ‘ಉಪ್ಪೇನಾ’ ಸಿನಿಮಾದಲ್ಲಿ ನಟಿಸಿದ ಇವರು ಸಾಕಷ್ಟು ಜನಪ್ರಿಯತೆ ಪಡೆಯುವ ಮೂಲಕ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಹೊರಹೊಮ್ಮಿದರು.
ಬುಚ್ಚಿ ಬಾಬು ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಮೂಲಕ ಸೂಪರ್ ಡೂಪರ್ ಹಿಟ್ ಆಯಿತು.
ಲಿಂಗುಸ್ವಾಮಿ ನಿರ್ದೇಶನದ ‘ದಿ ವಾರಿಯರ್’ ಹಾಗೂ ‘ಶ್ಯಾಮ್ ಸಿಂಗರಾಜು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕೃತಿ ಶೆಟ್ಟಿ ಇತ್ತೀಚೆಗೆ ‘ವನಂಗಾನ್’ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಇಂದು ಕೃತಿ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ