2017ರಲ್ಲಿ ತೆರೆಕಂಡ ವಿಜಯ್ ದೇವರಕೊಂಡ ನಟನೆಯ ಸೂಪರ್ ಡೂಪರ್ ಹಿಟ್ ‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಶಾಲಿನಿ ಪಾಂಡೆ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಶಾಲಿನಿ ಪಾಂಡೆ ತೆಲುಗು ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ
ನಟಿ ಶಾಲಿನಿ ಪಾಂಡೆ 2020 ರಲ್ಲಿ ತೆರೆಕಂಡ ತೆಲುಗಿನ ‘ನಿಶಬ್ದಂ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು ಮತ್ಯಾವ ಸಿನಿಮಾಗಳಲ್ಲೂ ಅಭಿನಯಿಸಿರಲಿಲ್ಲ.
ಇತ್ತೀಚೆಗೆ ಹಿಂದಿಯ ‘ಮಹಾರಾಜ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಸೋಷಿಯಲ್ ಮೀಡಿಯಾದಲ್ಲಿ ಶಾಲಿನಿ ಪಾಂಡೆ ಅವರ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.