
ನಟಿ ಆಶಿಕಾ ರಂಗನಾಥ್ ಇಂದು ತಮ್ಮ 27ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2016ರಲ್ಲಿ ತೆರೆಕಂಡ ‘ಕ್ರೇಜಿ ಬಾಯ್’ ಎಂಬ ರೋಮ್ಯಾಂಟಿಕ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಆಶಿಕ ರಂಗನಾಥ್ ಕಳೆದ ಎರಡು ವರ್ಷಗಳಿಂದ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್ನ ಬೇಡಿಕೆಯ ನಟಿಯಾಗಿದ್ದಾರೆ.
ನಟಿ ಆಶಿಕಾ ರಂಗನಾಥ್ ಇತ್ತೀಚೆಗೆ ತಮಿಳು ಚಿತ್ರಂಗಕ್ಕೂ ಪಾದರ್ಪಣೆ ಮಾಡಿದ್ದಾರೆ. ರಾಜೇಂದ್ರ ರೆಡ್ಡಿ ನಿರ್ದೇಶಿಸುತ್ತಿರುವ ‘ಅಮಿಗೋಸ್’ ಹಾಗೂ ‘ಪಟ್ಟಾತು ಅರಸನ್’ ಸಿನಿಮಾ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಿನಿತಾರೆಯರು ಹಾಗೂ ಅವರ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.


