ಬಹುಭಾಷಾ ನಟಿ ಪಾರ್ವತಿ ಮೆನನ್ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
2006ರಲ್ಲಿ ತೆರೆಕಂಡ ವಿಶ್ವನಾಥನ್ ನಿರ್ದೇಶನದ ‘ಔಟ್ ಆಫ್ ಸಿಲೆಬಸ್’ ಎಂಬ ತಮಿಳು ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. 2007ರಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಮಿಲನ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಪಾರ್ವತಿ ಮೆನನ್ ಗೆ ಭರ್ಜರಿ ಯಶಸ್ಸು ಸಿಕ್ಕಿತು.
ಪ್ರಕಾಶ್ ನಿರ್ದೇಶನದ ಈ ಚಿತ್ರ 1 ವರ್ಷಕ್ಕೂ ಅಧಿಕ ಪ್ರದರ್ಶನ ಕಾಣುವ ಮೂಲಕ ಹೊಸ ದಾಖಲೆ ಬರೆಯಿತು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ‘ಅಂದರ್ ಬಾಹರ್’ ಚಿತ್ರದಲ್ಲಿ ಅಭಿನಯಿಸಿದ ಪಾರ್ವತಿ ಮೆನನ್ ನಂತರ ಯಾವ ಕನ್ನಡ ಸಿನಿಮಾಗಳಲ್ಲೂ ಕಾಣಿಸಿಕೊಂಡಿಲ್ಲ. ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿ ತಾರೆಯರಿಂದ ಹಾಗೂ ಅವರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.