ಬಹುಭಾಷಾ ನಟಿ ಶೃತಿ ಹರಿಹರನ್ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಲಯಾಳಂನ ‘ಸಿನಿಮಾ ಕಂಪನಿ’ ಎಂಬ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ಶೃತಿ ಹರಿಹರನ್ 2013ರಲ್ಲಿ ತೆರೆಕಂಡ ಸತೀಶ್ ನೀನಾಸಂ ನಟನೆಯ ‘ಲೂಸಿಯಾ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು ಕನ್ನಡ ತಮಿಳು ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಶೃತಿ ಹರಿಹರನ್ ಇತ್ತೀಚೆಗೆ ತಮಿಳಿನ ವೆಬ್ ಸಿರೀಸ್ ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಶೃತಿ ಹರಿಹರನ್ ಅಭಿನಯಿಸಿರುವ ‘ಸಾಲುಗಾರ’ ಹಾಗೂ ‘ಸ್ಟ್ರಾಬೆರಿ’ ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು, ತೆರೆಮೇಲೆ ಬರಲು ಸಜ್ಜಾಗಿವೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಿನಿತಾರೆಯರು ಶೃತಿ ಹರಿಹರನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.