ಖ್ಯಾತ ನಟ ಪ್ರಭಾಸ್ ಇಂದು ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ 2002ರಲ್ಲಿ ತೆರೆಕಂಡ ‘ಈಶ್ವರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿ, ನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು 2015ರಲ್ಲಿ ತೆರೆಕಂಡ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ಇಡೀ ಭಾರತವಲ್ಲದೆ ವಿಶ್ವಾದಾದ್ಯಂತ ಹೆಸರು ಮಾಡಿತು, ಪ್ರಭಾಸ್ ಗೆ ಬೇರೆ ಬೇರೆ ರಾಜ್ಯ ವಿದೇಶಗಳಲ್ಲೂ ಅಭಿಮಾನಿಗಳು ಹುಟ್ಟಿಕೊಂಡರು. ನಂತರ 2017ರಲ್ಲಿ ಬಂದ ಬಾಹುಬಲಿ ಎರಡನೇ ಭಾಗ ಕೂಡ 1800 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆಯಿತು.
LKG, UKG ಕೂಡ ಆರಂಭಿಸುವ ಬಗ್ಗೆ ಸಚಿವ ನಾಗೇಶ್ ಮುಖ್ಯ ಮಾಹಿತಿ: ಅ 25 ರಿಂದ 1 -5 ನೇ ಕ್ಲಾಸ್ ಆರಂಭದ ಬಳಿಕ ನಿರ್ಧಾರ
ಪ್ರಭಾಸ್ ಇತ್ತೀಚೆಗೆ ‘ರಾಧೆಶ್ಯಾಮ್’ ‘ಸಲಾರ್’ ಹಾಗೂ ‘ಆದಿಪುರುಷ್’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ರಾಧೆಶ್ಯಾಮ್ ಚಿತ್ರತಂಡ ಟೀಸರ್ ಬಿಡುಗಡೆ ಮಾಡಲಿದ್ದಾರೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಈ ಟೀಸರ್ ರಿಲೀಸ್ ಆಗಲಿದ್ದು ಎಲ್ಲಾ ಭಾಷೆಯ ಲೋಗೋವನ್ನು ಈ ಟೀಸರ್ ನಲ್ಲಿ ತೋರಿಸಲಿದ್ದಾರೆ ಎಂದು ಹೇಳಲಾಗಿದೆ.