ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರೇಮ್ ಇಂದು ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕರಿಯ’ ಚಿತ್ರದ ಮೂಲಕ ಪ್ರೇಮ್ ನಿರ್ದೇಶನಕ್ಕಿಳಿದರು ಈ ಸಿನಿಮಾ 2 ವರ್ಷಕ್ಕೂ ಅಧಿಕ ಪ್ರದರ್ಶನ ಕಾಣುವ ಮೂಲಕ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು ನಂತರ ‘ಎಕ್ಸ್ ಕ್ಯೂಸ್ ಮಿ’ ‘ಜೋಗಿ’ ಹೀಗೆ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದರು.
ಕೂಗಾಡಿದ ಪತ್ನಿಯನ್ನು ಕೊಂದು ಸಮುದ್ರಕ್ಕೆಸೆದ ಪತಿ….!
2007ರಲ್ಲಿ ತೆರೆಕಂಡ ‘ಈ ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಾಯಕನಾಗಿ ಅಭಿನಯಿಸಿದರು. ಸಾಕಷ್ಟು ಸಿನಿಮಾ ಹಾಡುಗಳಿಗೆ ಧ್ವನಿಗೂಡಿಸಿದ್ದಾರೆ ಇವರು ಹಾಡಿರುವ ಎಲ್ಲ ಹಾಡುಗಳು ಯೂಟ್ಯೂಬ್ ನಲ್ಲಿ ದಾಖಲೆ ಸೃಷ್ಟಿಸಿವೆ. ಪ್ರೇಮ್ ಕೇವಲ ನಿರ್ದೇಶಕನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿ ಹಾಗೂ ನಾಯಕನಟನಾಗಿ ಮತ್ತು ಗಾಯಕನಾಗಿ ಹೀಗೆ ಎಲ್ಲ ವಿಭಾಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ