
ದಕ್ಷಿಣ ಭಾರತದ ಖ್ಯಾತ ನಟ ಶರತ್ ಬಾಬು ಇಂದು ತಮ್ಮ 70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶರತ್ ಬಾಬು ‘ರಾಮರಾಜ್ಯಂ’ ಎಂಬ ತೆಲುಗು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು 1973ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. 1980ರಲ್ಲಿ ತೆರೆಕಂಡ ‘ತುಳಸಿದಳ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು.
ಟೊಕಿಯೋ ಒಲಿಂಪಿಕ್ಸ್: ಫೈನಲ್ ಗೆ ಲಗ್ಗೆಯಿಟ್ಟ ಕಮಲ್ ಪ್ರೀತ್ ಕೌರ್
ಶರತ್ ಬಾಬು ತೆಲುಗು, ತಮಿಳು, ಕನ್ನಡ, ಹಾಗೂ ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಇಂದು ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಸೇರಿದಂತೆ ಬೇರೆ ಭಾಷೆಯ ಸಿನಿಮಾ ಕಲಾವಿದರು ಶರತ್ ಬಾಬು ಅವರಿಗೆ ವಿಶ್ ಮಾಡಿದ್ದಾರೆ.